ಬ್ರಿಜ್ ಭೂಷಣ್ ಗೆ ಪೋಕ್ಸೊ ಅನ್ವಯಿಸುವುದಿಲ್ಲವೇ?: ಕಪಿಲ್ ಸಿಬಲ್ ಪ್ರಶ್ನೆ

Update: 2023-05-31 16:37 GMT

ಹೊಸದಿಲ್ಲಿ: ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತಾಗಿ ಕೇಂದ್ರ ಸರಕಾರದ ಧೋರಣೆಯನ್ನು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಬುಧವಾರ ತೀವ್ರವಾಗಿ ಖಂಡಿಸಿದ್ದಾರೆ. ಬ್ರಿಜ್‌ಭೂಷಣ್ ಸಿಂಗ್ ಬಿಜೆಪಿಯವರೆಂಬ ಕಾರಣದಿಂದಾಗಿ ಪೋಕ್ಸೊ ಕಾಯ್ದೆಯು ಅವರಿಗೆ ಅನ್ವಯಿಸುವುದಿಲ್ಲ ಹಾಗೂ ಇನ್ನೂ ಅವರ ಬಂಧನವಾಗಿಲ್ಲವೆಂದು ಅವರು ಟೀಕಿಸಿದ್ದಾರೆ.‌

ಈ ಬಗ್ಗೆ ಟ್ವೀಟ್ ಮಾಡಿರುವ ಸಿಬಲ್ ಅವರು, ‘‘ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಹೊರತುಪಡಿಸಿ ಇತರ ಎಲ್ಲಾ ಆರೋಪಿಳಿಗೆೆ ಪೋಸ್ಕೊ ಕಾಯ್ದೆ ಅನ್ವಯಿಸುತ್ತದೆ ಹಾಗೂ ತಕ್ಷಣವೇ ಅವರ ಬಂಧನವಾಗುತ್ತದೆ.ಯಾಕೆಂದರೆ ಆತ ಬಿಜೆಪಿಗೆ ಸೇರಿದವರಾಗಿದ್ದಾರೆ. ಮಹಿಳಾ ಕುಸ್ತಿಪಟುಗಳು ಇಲ್ಲಿ ಮುಖ್ಯವಲ್ಲ. ಮತಗಳು ಮುಖ್ಯವಾಗಿವೆ. ಸರಕಾರಕ್ಕೆ ಕಾಳಜಿಯೇ ಇಲ್ಲ, ನನ್ನ ನವ ಭಾರತ ಇದೇನಾ? ಎಂದು ಸಿಬಲ್ ಪ್ರಶ್ನಿಸಿದ್ದಾರೆ.

ಬ್ರಿಜ್ ಸಿಂಗ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ಪರವಾಗಿ ಕಪಿಲ್ ಸಿಬಲ್ ಅವರು ಸುಪ್ರೀಂಕೋರ್ಟ್ ನಲ್ಲಿ ವಾದಿಸಿದ್ದರು. ಕುಸ್ತಿಪಟುಗಳ ವಿರುದ್ಧ ಪೊಲೀಸ್ ದೌರ್ಜನ್ಯಕ್ಕೆ ಜಾಗತಿಕ ಕುಸ್ತಿ ಸಂಘಟನೆ ಖಂಡನೆ

Similar News