10ನೇ ತರಗತಿಯ ಪಠ್ಯಪುಸ್ತಕಗಳಿಂದ ಪ್ರಜಾಪ್ರಭುತ್ವ ವಿಷಯವನ್ನು ಕೈಬಿಟ್ಟ ಕೇಂದ್ರ ಸರಕಾರ

Update: 2023-06-01 11:14 GMT

ಹೊಸದಿಲ್ಲಿ: 10 ನೇ ತರಗತಿಯ ವಿದ್ಯಾರ್ಥಿಗಳು ಇನ್ನು ಮುಂದೆ ಸರಕಾರದಿಂದ ಪ್ರಕಟಿತ ಪಠ್ಯಪುಸ್ತಕಗಳಿಂದ ಪಿರಿಯೋಡಿಕ್ ಟೇಬಲ್, ಪ್ರಜಾಪ್ರಭುತ್ವ ಹಾಗೂ ಶಕ್ತಿಯ ಮೂಲಗಳ ವಿಷಯವನ್ನು ಕಲಿಯುವುದಿಲ್ಲ.  ''ವಿದ್ಯಾರ್ಥಿಗಳ ಮೇಲಿನ ಹೊರೆ" ಕಡಿಮೆ ಮಾಡುವ ಉದ್ದೇಶದಿಂದ "ವೈಚಾರಿಕತೆ'ಯ ಭಾಗವಾಗಿ ಈಗ ವಿಷಯಗಳ ಸಂಪೂರ್ಣ ಅಧ್ಯಾಯಗಳನ್ನು ಅಳಿಸಲಾಗಿದೆ.

10 ನೇ ತರಗತಿಯ ಪಠ್ಯಕ್ರಮದಿಂದ ವಿಕಾಸದ ಸಿದ್ಧಾಂತವನ್ನು ತೆಗೆದುಹಾಕುವಿಕೆಯು ಈ ವರ್ಷದ ಆರಂಭದಲ್ಲಿ ಹೆಚ್ಚು ಕಳವಳವನ್ನು   ಹುಟ್ಟುಹಾಕಿತ್ತು. 

ನ್ಯಾಶನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ (ಎನ್ಸಿಇಆರ್ಟಿ) ಹೊಸದಾಗಿ ಬಿಡುಗಡೆ ಮಾಡಿರುವ ಪಠ್ಯಪುಸ್ತಕಗಳು ಪಿರಿಯೋಡಿಕ್ ಟೇಬಲ್ ಅಧ್ಯಾಯ ಸೇರಿದಂತೆ ಮತ್ತಷ್ಟು ಕಡಿತಗಳನ್ನು ಬಹಿರಂಗಪಡಿಸಿವೆ.

ವಿಜ್ಞಾನ ಪಠ್ಯಪುಸ್ತಕದಿಂದ ಕೈಬಿಡಲಾದ ವಿಷಯಗಳಲ್ಲಿ ಪರಿಸರ ಸುಸ್ಥಿರತೆ ಹಾಗೂ  ಶಕ್ತಿಯ ಮೂಲಗಳ ಅಧ್ಯಾಯಗಳೂ ಸೇರಿವೆ. 

ಇತ್ತೀಚಿನ ಪರಿಷ್ಕರಣೆಯ ನಂತರ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವ ಹಾಗೂ  ರಾಜಕೀಯ ಪಕ್ಷಗಳಿಗೆ ಸವಾಲುಗಳ ಸಂಪೂರ್ಣ ಅಧ್ಯಾಯಗಳನ್ನು ಕೈಬಿಡಲಾಗಿದೆ.

Similar News