‘ಸ್ಥಳೀಯಾಡಳಿತ ಮೂಲಕವೇ ಜನರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ’

Update: 2023-06-01 15:05 GMT

ಬ್ರಹ್ಮಾವರ, ಜೂ.1: ಜನಸಾಮಾನ್ಯರ ಸ್ಥಳೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಗ್ರಾಮ ಪಂಚಾಯತ್ ಮಟ್ಟ ದಲ್ಲಿಯೇ ಪರಿಹಾರ ಒದಗಿಸಲು ಆದ್ಯತೆ ನೀಡಬೇಕು ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧಿಕಾರಿ ಗಳಿಗೆ ಸೂಚಿಸಿದರು.

ಹಂದಾಡಿ ಗ್ರಾಪಂ ಸಭಾಂಗಣದಲ್ಲಿ ಬುಧವಾರ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್ ಮೂರ್ತಿ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡುತಿದ್ದರು.

ಬ್ರಹ್ಮಾವರ ತಾಲೂಕಿನ ಜನ ಸಾಮಾನ್ಯರ ಬೇಡಿಕೆಗಳಾದ ರೇಶನ್ ಕಾರ್ಡ್, ತ್ಯಾಜ್ಯ ಸಂಸ್ಕರಣಾ ಘಟಕ, ಹಕ್ಕುಪತ್ರ, ಮಳೆಗಾಲದ ಪೂರ್ವ ಸಿದ್ಧತೆ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಲೈಸೆನ್ಸ್, ಸರ್ವೇ ಕಾರ್ಯ ವಿಳಂಬ ಹಾಗೂ ಸ್ಥಳೀಯ ಪಂಚಾಯತ್ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ತುರ್ತು ಸ್ಪಂದನೆ ನೀಡುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ಇಬ್ರಾಹಿಂಪುರ್, ಹಂದಾಡಿ ಗ್ರಾಪಂ ಅಧ್ಯಕ್ಷ ನಿರಂಜನ್ ಪೂಜಾರಿ, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಸದಸ್ಯರು, ಕಂದಾಯ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Similar News