ಅಮೆರಿಕ: ಭಾರತೀಯ ಮೂಲದ ದೇವ್ ಶಾ ರಾಷ್ಟ್ರೀಯ ಸ್ಪೆಲ್ಲಿಂಗ್ ಬಿ ಚಾಂಪಿಯನ್

Update: 2023-06-02 17:13 GMT

ನ್ಯೂಯಾರ್ಕ್: ಅಮೆರಿಕದ ‘ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ’ ಚಾಂಪಿಯನ್ಷಿಪನಲ್ಲಿ 14 ವರ್ಷದ ಭಾರತೀಯ ಅಮೆರಿಕನ್ ದೇವ್ ಶಾ ಪ್ರಶಸ್ತಿ ಪಡೆದ ಸಾಧನೆ ಮಾಡಿರುವುದಾಗಿ ವರದಿಯಾಗಿದೆ.

ಫ್ಲೋರಿಡಾದ ಲಾರ್ಗೋ ನಿವಾಸಿಯಾಗಿರುವ ದೇವ್ ಶಾ, ಅಂತಿಮ ಸುತ್ತಿನಲ್ಲಿ ತನ್ನ ಸಹಪಾಠಿ ವರ್ಜೀನಿಯಾ ನಿವಾಸಿ ಚಾರ್ಲೊಟ್ ವಾಲ್ಶ್ರನ್ನು ಮೀರಿಸಿ ಪ್ರಥಮ ಸ್ಥಾನ ಪಡೆದರು. 14ನೆಯ  ಸುತ್ತಿನಲ್ಲಿ ಸ್ಕಾಟ್ ಮೂಲದ ಶಬ್ದವಾದ ‘ಡ್ಯಾವಿಲೆ’ಯ ಸ್ಪೆಲ್ಲಿಂಗನ್ನು ತಪ್ಪಾಗಿ ಉಚ್ಚರಿಸಿದ ಚಾರ್ಲೊಟ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಈ ವರ್ಷದ ಸ್ಪರ್ಧೆಯಲ್ಲಿ 94 ಬಾಲಕಿಯರು, 134 ಬಾಲಕರು, ಇಬ್ಬರು ತೃತೀಯ ಲಿಂಗಿಗಳು ಪಾಲ್ಗೊಂಡಿದ್ದರು. ಮೋರ್ಗನ್ ಫಿಟ್ಜೆರಾಲ್ಡ್ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಯಾಗಿರುವ ದೇವ್ ಶಾ, ಸ್ಪರ್ಧೆಯ ಪ್ರಾಯೋಜಕರಾದ ಇ.ಡಬ್ಲ್ಯು.ಸ್ಕ್ರಿಪ್ಸ್ ಸಂಸ್ಥೆಯ 50,000 ಡಾಲರ್ ನಗದು ಸಹಿತ ಇತರ ನಗದು ಹಾಗೂ ಫಲಕಗಳನ್ನು ಪಡೆಯಲಿದ್ದಾರೆ.

Similar News