ಕೆಎಂಸಿ ಮಣಿಪಾಲ: ವೈದ್ಯಕೀಯ ತಳಿಶಾಸ್ತ್ರ ವಿಭಾಗ ಉದ್ಘಾಟನೆ

Update: 2023-06-03 13:49 GMT

ಮಣಿಪಾಲ, ಜೂ.3: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿ ನಲ್ಲಿ ವೈದ್ಯಕೀಯ ತಳಿಶಾಸ್ತ್ರ ವಿಭಾಗ (ಮೆಡಿಕಲ್ ಜೆನೆಟಿಕ್ಸ್) ಹೊಸ ಸೌಲಭ್ಯ ಗಳೊಂದಿಗೆ ಇಂದು ಉದ್ಘಾಟನೆಗೊಂಡಿದೆ.ಇದು ಶಿಕ್ಷಣ, ಸಂಶೋಧನೆ ಮತ್ತು ರೋಗಿಗಳ ಆರೈಕೆಯ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

ವಿಭಾಗವು ಡಿ.ಎಂ.(ಮೆಡಿಕಲ್ ಜೆನೆಟಿಕ್ಸ್), ಎಂಎಸ್ಸಿ (ಜೆನೆಟಿಕ್ ಕೌನ್ಸೆಲಿಂಗ್) ಮತ್ತು ಡಾಕ್ಟರ್ ಆಫ್ ಫಿಲಾಸಫಿ ಪದವಿಗಳಂತಹ ವಿಶೇಷ ಕಾರ್ಯಕ್ರಮಗಳನ್ನು ನೀಡಲಿದೆ. ಎಂಎಸ್ಸಿ (ಜೆನೆಟಿಕ್ ಕೌನ್ಸೆಲಿಂಗ್) ಪದವಿ ಭಾರತದಲ್ಲಿ ಮೊದಲನೆಯದು ಎಂದು ಕೆಎಂಸಿಯ ಡೀನ್ ಡಾ.ಪದ್ಮರಾಜ್ ಹೆಗ್ಡೆ ತಿಳಿಸಿದ್ದಾರೆ. 

ಮಾಹೆ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ, ಇದರ ಸಂಶೋಧನೆ, ಬೋಧನೆ ಹಾಗೂ ಅಭಿವೃದ್ಧಿ ಫಲಿತಾಂಶ ಗಳನ್ನು ಸುಧಾರಿಸಲು ಇಲ್ಲಿನ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ತಿಳಿಸಿದರು.

ಮಾಹೆ ಪ್ರೊವೈಸ್ ಚಾನ್ಸಲರ್ (ಆರೋಗ್ಯ ವಿಜ್ಞಾನ) ಡಾ. ಶರತ್ ಕೆ ರಾವ್ ಅವರು ಹೊಸ ವಿಭಾಗದ ಆರಂಭದ ಬಗ್ಗೆ ಮಾತನಾಡಿದರು. ವೈದ್ಯಕೀಯ ಜೆನೆಟಿಕ್ಸ್ ವಿಭಾಗದ ಮುಖ್ಯಸ್ಥೆ  ಪ್ರೊ. ಡಾ ಅಂಜು ಶುಕ್ಲಾ, ಶೈಕ್ಷಣಿಕ ಶ್ರೇಷ್ಠತೆ ಮತ್ತು ನಾವೀನ್ಯತೆ ಸಾಧನೆಗೆ ಇದು ಸಹಕಾರಿ ಎಂದರು. 

ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ ಮಾತನಾಡಿ ವೈದ್ಯಕೀಯ ಜೆನೆಟಿಕ್ಸ್ ವಿಭಾಗದ ಆರಂಭವು ಆರೋಗ್ಯ ಮತ್ತು ಸಂಶೋಧನೆ ಅನ್ವೇಷಣೆಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದರು. 

Similar News