ಯುವತಿ ನಾಪತ್ತೆ

Update: 2023-06-03 15:19 GMT

ಮಂಗಳೂರು: ಶರೀನ್ ಬಾನು (19 ವರ್ಷ) 2023ರ ಜೂ.1ರಿಂದ ಕಾಣೆಯಾಗಿರುವ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವಭಾರತ್ ಸರ್ಕಲ್ ಬಳಿಯ ಕೆಫೆ ಒಂದರಲ್ಲಿ ಪಾರ್ಟ್‌ ಟೈಮ್ ಕೆಲಸ ಮಾಡಿಕೊಂಡಿದ್ದು, ಜೂ.1ರಂದು ಮೂಡಿಗೆರೆಗೆ ಬರುವುದಾಗಿ ಫೋನ್ ಮಾಡಿ ತಿಳಿಸಿದ್ದರು. ಆದರೆ  ಆಕೆ ಮನೆಗೆ  ಬಂದಿಲ್ಲ ಎಂದು ಅವರ ಸಹೋದರ ಅಶ್ಫನ್ ಅಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಚಹರೆ: ಎತ್ತರ 5 ಅಡಿ, ಬಿಳಿ ಮೈ ಬಣ್ಣ, ಸಾಧಾರಣ ಸಪೂರ ಶರೀರ ಹೊಂದಿರುತ್ತಾರೆ. ಕಪ್ಪು ಬಣ್ಣದ ಬುರ್ಖಾ ಧರಿಸಿದ್ದು ,ಉರ್ದು, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಮಾತನಾಡುತ್ತಾರೆ.

ಇವರು ಪತ್ತೆಯಾದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ದೂ.ಸಂಖ್ಯೆ: 0824-2220518, ಪೊಲೀಸ್ ಕಂಟ್ರೋಲ್ ರೂಮ್ - 0824-2220800, ಪೊಲೀಸ್ ನಿರೀಕ್ಷಕರು -9480805339, ಪೊಲೀಸ್ ಉಪ ನಿರೀಕ್ಷಕರು 9480805346ಗೆ ಕರೆ ಮಾಡಿ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News