ಭಾರತದಲ್ಲಿ ತಪ್ಪುಗಳು ನಡೆಯುತ್ತಿದ್ದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿಲ್ಲ:ರಾಹುಲ್ ಗಾಂಧಿ

ಪ್ರಧಾನಿ ಭಾರತವೆಂಬ ಕಾರನ್ನು ಹಿಂಬದಿಯ ಕನ್ನಡಿ ನೋಡಿಕೊಂಡು ಓಡಿಸುತ್ತಿದ್ದಾರೆ

Update: 2023-06-05 05:27 GMT

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಹಾಗೂ  ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) , ಬಿಜೆಪಿಯವರು ಎಂದಿಗೂ ಭವಿಷ್ಯದ ಬಗ್ಗೆ ಮಾತನಾಡುವುದಿಲ್ಲ. ತಮ್ಮ ವೈಫಲ್ಯಗಳಿಗೆ ಯಾವಾಗಲೂ ಬೇರೆಯವರನ್ನು ದೂರುತ್ತಾರೆ. ನಾವು ಎದುರಿಸುತ್ತಿರುವ ವಾಸ್ತವವನ್ನು ನಾವು ಒಪ್ಪಿಕೊಳ್ಳುತ್ತಿಲ್ಲ. ಇತ್ತೀಚೆಗೆ ಭಾರತದಲ್ಲಿ ತಪ್ಪುಗಳು ನಡೆಯುತ್ತಿದ್ದರೂ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿಲ್ಲ ಎಂದರು.

 ಅಮೆರಿಕಾ ಪ್ರವಾಸದಲ್ಲಿರುವ  ರಾಹುಲ್  ಗಾಂಧಿ ಅವರು ಜಾವಿಟ್ಸ್ ಸೆಂಟರ್‌ನಲ್ಲಿ ಭಾರತೀಯ-ಅಮೆರಿಕನ್ನರನ್ನು  ಉದ್ದೇಶಿಸಿ ಮಾತನಾಡಿದರು. ಈ ವೇಳೆ ಒಡಿಶಾ ರೈಲು ಅಪಘಾತದಲ್ಲಿ ಮಡಿದವರಿಗೆ 60 ಸೆಕೆಂಡುಗಳ ಕಾಲ ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು.

ಮೂರು ರೈಲುಗಳನ್ನು ಒಳಗೊಂಡ ಅಪಘಾತದಲ್ಲಿ 270 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ರೈಲ್ವೆ ಸುರಕ್ಷತೆಯ ಸಮಸ್ಯೆ ಎದ್ದುಕಂಡಿದೆ . ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ಎಂದು ಕೆಲವೆಡೆ ಆಗ್ರಹ ಕೇಳಿಬಂದಿದೆ.

 "ನನಗಿನ್ನೂ  ನೆನಪಿದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈಲು ಅಪಘಾತ ಸಂಭವಿಸಿದೆ,  ಆಗ ರೈಲ್ವೆ ಸಚಿವರು ಎದ್ದುನಿಂತು "ಈಗ ರೈಲು ಅಪಘಾತಕ್ಕೀಡಾಗಲು ಬ್ರಿಟಿಷರೇ ಕಾರಣ" ಎಂದು ಹೇಳಿರಲಿಲ್ಲ, ಇದರ ಸಂಪೂರ್ಣ ಹೊಣೆ ನನ್ನದು . ನಾನು ರಾಜೀನಾಮೆ ನೀಡುತ್ತೇನೆ" ಎಂದು ಹೇಳಿದ್ದರು.  ಈಗ  ನಾವು ಎದುರಿಸುತ್ತಿರುವ ವಾಸ್ತವವನ್ನು ನಾವು ಒಪ್ಪಿಕೊಳ್ಳುತ್ತಿಲ್ಲ" ಎಂದು ಕಾಂಗ್ರೆಸ್ ಸಚಿವರನ್ನು ಹೆಸರಿಸದೆ  ರಾಹುಲ್  ಗಾಂಧಿ ಹೇಳಿದರು.

"ಅವರು (ಪ್ರಧಾನಿ ನರೇಂದ್ರ ಮೋದಿ) ಭಾರತವೆಂಬ ಕಾರನ್ನು ಹಿಂಬದಿಯ ಕನ್ನಡಿ ನೋಡಿಕೊಂಡು ಓಡಿಸುತ್ತಿದ್ದಾರೆ. ಈ ಕಾರು ಅಪಘಾತಗೊಂಡು ನಿಂತಾಗ ಅದು ಏಕೆ ಮುಂದಕ್ಕೆ ಚಲಿಸುತ್ತಿಲ್ಲ ಎಂಬುದರ ಬಗ್ಗೆ ಅವರಿಗೆ ಅರ್ಥವಾಗುತ್ತಿಲ್ಲ. ಬಿಜೆಪಿ ಹಾಗೂ  ಆರೆಸ್ಸೆಸ್ ನ ಕಲ್ಪನೆ ಒಂದೇ ಆಗಿದೆ, ನೀವು ಮಂತ್ರಿಗಳ ಮಾತುಗಳನ್ನು ಕೇಳುತ್ತೀರಿ, ನೀವು ಪ್ರಧಾನಿಯ ಮಾತುಗಳನ್ನು ಕೇಳುತ್ತೀರಿ, ಅವರು ಭವಿಷ್ಯದ ಬಗ್ಗೆ ಮಾತನಾಡುವುದನ್ನು ನೀವು ಎಂದಿಗೂ ಕೇಳುವುದಿಲ್ಲ, ಅವರು ಭೂತಕಾಲದ ಬಗ್ಗೆ ಮಾತ್ರ ಮಾತನಾಡುತ್ತಾರೆ.  ಬಿಜೆಪಿ ಹಾಗೂ ಆರೆಸ್ಸೆಸ್  ಭವಿಷ್ಯದ ಬಗ್ಗೆ ಯೋಚಿಸಲು ಅಸಮರ್ಥವಾಗಿವೆ ಎಂದು ಅವರು ಹೇಳಿದರು.

Similar News