ಸಾಲದ ಸುಳಿಯಲ್ಲಿ ಬೈಜೂಸ್: ಇಂದು ತ್ರೈಮಾಸಿಕ ಬಡ್ಡಿ 40 ಮಿಲಿಯನ್ ಡಾಲರ್ ಪಾವತಿಸಲು ಗಡುವು

Update: 2023-06-05 09:04 GMT

ಹೊಸದಿಲ್ಲಿ: ಸಾಲದ ಸುಳಿಯಲ್ಲಿರುವ ಶಿಕ್ಷಣ ಕ್ಷೇತ್ರದ ನವೋದ್ಯಮವಾಗಿರುವ  ಬೈಜೂಸ್ ತಾನು ಪಡೆದಿರುವ ದೊಡ್ಡ ಮೊತ್ತದ ಸಾಲದ ಮೇಲಿನ ತ್ರೈಮಾಸಿಕ ಬಡ್ಡಿಯಾದ 40 ಮಿಲಿಯನ್ ಡಾಲರ್ ಪಾವತಿಸಲು ಯೋಜಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗದೆ.

ಇಂದು ಅಂತಿಮ ದಿನಾಂಕವಾಗಿರುವುದರಿಂದ ಸಂಸ್ಥೆ ಇಂದೇ ಈ ಬಡ್ಡಿ ಪಾವತಿಸುವ ನಿರೀಕ್ಷೆಯಿದೆ. ಇಂದು ಬಡ್ಡಿ ಪಾವತಿಸದೇ ಇದ್ದಲ್ಲಿ ಈ 1.2 ಬಿಲಿಯನ್ ಡಾಲರ್ ಸಾಲ ಮರುಪಾವತಿ ಗುಡುವು ಮುಗಿಯಲಿದೆ.

ಯಾವುದೇ ನವೋದ್ಯಮ ಪಡೆದಿರುವ ಅನ್ರೇಟೆಡ್ ಸಾಲದ ಪ್ರಮಾಣದಲ್ಲಿ ಬೈಜೂಸ್ ಪಡೆದಿರುವ ಸಾಲದ ಪ್ರಮಾಣ ಗರಿಷ್ಠವಾಗಿದೆ. ಬೈಜು ರವೀಂದ್ರನ್ ನೇತೃತ್ವದ ಈ ಸಂಸ್ಥೆ ಕೋವಿಡ್ ಸಮಯದಲ್ಲಿ ಭಾರೀ  ಯಶಸ್ಸು ಗಳಿಸಿದರೂ ನಂತರದ ದಿನಗಳಲ್ಲಿ ಆನ್ಲೈನ್ ಕೋಚಿಂಗಿಗೆ ಬೇಡಿಕೆ ತಗ್ಗುತ್ತಿದ್ದಂತೆಯೇ ಸಂಸ್ಥೆಯ ಆರ್ಥಿಕತೆಯ ಮೇಲೂ ಹೊಡೆತ ಬಿದ್ದಿತ್ತು.

ತನ್ನ ವಾರ್ಷಿಕ ಲೆಕ್ಕಪತ್ರ ಸಲ್ಲಿಸುವ ಗಡುವುಗಳನ್ನೂ ಬೈಜೂಸ್ ತಪ್ಪಿಕೊಂಡಿದ್ದು ಈಗಾಗಲೇ ಸಂಸ್ಥೆಯ ಹಲವು ಕಚೇರಿಗಳಲ್ಲಿ ಕೇಂದ್ರೀಯ ತನಿಖಾ ಏಜನ್ಸಿಗಳು ಶೋಧ ಕಾರ್ಯಾಚರಣೆ ನಡೆಸಿವೆ.

Similar News