​ಜೂ.6: ಗೃಹ ಸಚಿವ ಡಾ.ಪರಮೇಶ್ವರ್ ಉಡುಪಿಗೆ ಭೇಟಿ

Update: 2023-06-05 14:01 GMT

ಉಡುಪಿ, ಜೂ.5: ಕರ್ನಾಟಕ ಸರಕಾರದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಜೂ.6ರ ಮಂಗಳವಾರ ಅಪರಾಹ್ನ ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. 

ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಡಾ.ಪರಮೇಶ್ವರ್ ಅವರು ಅಪರಾಹ್ನ 3 ಗಂಟೆಗೆ ಆಗಮಿಸಲಿದ್ದು, ಉಡುಪಿ  ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿಗೆ  ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಕಾನೂನು ಪಾಲನೆ ಕುರಿತು ಸಭೆ ನಡೆಸಲಿದ್ದಾರೆ.

ಬಳಿಕ ಅವರು ಸಂಜೆ 5:00 ಗಂಟೆಗೆ ಬ್ರಹ್ಮಗಿರಿಯ ನಾಯರ್‌ಕೆರೆ ಯಲ್ಲಿರುವ ಉಡುಪಿ  ಜಿಲ್ಲಾ  ಕಾಂಗ್ರೆಸ್  ಭವನಕ್ಕೆ  ಭೇಟಿ  ನೀಡಲಿರುವರು ಎಂದು  ಉಡುಪಿ  ಜಿಲ್ಲಾ  ಕಾಂಗ್ರೆಸ್  ಅಧ್ಯಕ್ಷ  ಅಶೋಕ್  ಕುಮಾರ್  ಕೊಡ ವೂರು  ಪ್ರಕಟನೆಯಲ್ಲಿ  ತಿಳಿಸಿದ್ದಾರೆ.

Similar News