ಮೂಳೂರು ಮರ್ಕಝ್ ಕ್ಯಾಂಪಸ್‌ನಲ್ಲಿ ಪರಿಸರ ದಿನಾಚರಣೆ

Update: 2023-06-05 16:35 GMT

ಕಾಪು: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‍ನ ಅಧೀನದಲ್ಲಿರುವ ಅಲ್-ಇಹ್ಸಾನ್ ದಅವಾ ಕಾಲೇಜು ಇದರ ರಿಕಾಝುಲ್ ಇಹ್ಸಾನ್ ವಿದ್ಯಾರ್ಥಿ ಸಂಘಟನೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗ್ರೀನ್ ಟಾಕ್, ಸಸಿ ನೆಡುವ ಕಾರ್ಯಕ್ರಮ ಪ್ರಬಂಧ ಸ್ಪರ್ಧೆ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದಅವಾ ಕಾಲೇಜು ಸಿಬ್ಬಂದಿಗಳಿಂದ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಧ್ಯಾಹ್ನ 2 ಗಂಟೆಗೆ ದಅವಾ ಕಾಲೇಜು ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಂಜೆ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು ಹಾಗೂ  ಪರಿಸರ ಸಂರಕ್ಷಣಾ ಜಾಗೃತಿ ಎಂಬ ವಿಷಯದ ಕುರಿತು ಮಹಮ್ಮದ್ ಹನೀಫ್ ಪಣಕಜೆ ಸೆಮಿನಾರ್ ಮಂಡಿಸಿದರು. ಅಲ್-ಇಹ್ಸಾನ್ ದಅವಾ ಕಾಲೇಜು ಪ್ರಾಂಶುಪಾಲರಾದ ಮುಹಮ್ಮದ್ ಸ್ವಾಬಿರ್ ಸಅದಿ ಅಲ್ ಅಸ್ನವೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಅಬ್ದುಲ್ ರಶೀದ್ ಸಅದಿ ಅಲ್ ಅಸ್ನವೀ ಕಾರ್ಯಕ್ರಮ ಉದ್ಘಾಟನೆಗೈದರು.

ಕಾರ್ಯಕ್ರಮದಲ್ಲಿ ಇಬ್ರಾಹಿಂ ಬಾತೀಷ್ ಹಿಮಮಿ ಅಸ್ಸಖಾಫಿ, ಹಾಫೀಳ್ ಮಸ್ರೂರ್ ಸುರೈಜಿ ಸ್ಸಖಾಫಿ ಅಲ್ ವಾರಿಸಿ, ಅಹ್ಮದ್ ಉನೈಸ್ ಅಹ್ಸನಿ, ಅಬ್ದುಲ್ ಹಮೀದ್ ಅಹ್ಸನಿ ಕೆ.ಸಿ ರೋಡ್ ಮಹಮ್ಮದ್ ಅನೀಸ್  ಉಪಸ್ಥಿತರಿ ದ್ದರು. ಕಾರ್ಯಕ್ರಮದಲ್ಲಿ ಉಮರುಲ್ ಫಾರೂಖ್‍ರವರು ಸ್ವಾಗತಿಸಿದರೆ, ಮುಹಮ್ಮದ್ ರಾಫಿಹ್ ಸಜಿಪ ವಂದಿಸಿದರು.

Similar News