ಸಸಿಗಳಿಗೆ ಕೀಟನಾಶ, ನೀರು ಗೊಬ್ಬರಕ್ಕಿಂತ ಮನುಷ್ಯರ ಆರೈಕೆ ಮುಖ್ಯ- ಅಬ್ದುಲ್ ವಾಹಿದ್ ಖತೀಬ್

Update: 2023-06-05 16:40 GMT

ಭಟ್ಕಳ: . ಸಸಿಗಳಿಗೆ ನೀರು,ಗೊಬ್ಬರ ಕೀಟನಾಶಕಗಳಿಗಿಂತ ಮನುಷ್ಯರ ಪ್ರೀತಿಯ ಆರೈಕೆ ಅತಿ ಮುಖ ಎಂದು ಪರಿಸರ ಪ್ರೇಮಿ ಅಬ್ದುಲ್ ವಾಹಿದ್ ಖತೀಬ್ ಹೇಳಿದರು.

ಅವರು ಸೋಮವಾರ ಜಾಮಿಯಾದ್ ನಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ಶಾಲಾ ಆವರಣದಲ್ಲಿ ಪರಿಸರ ದಿನ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪರಿಸರದ ಸಮತೋಲನ ಕಾಪಾಡಿಕೊಂಡು ಬರುವಲ್ಲಿ ಗಿಡಮರಗಳು ಬಹಳ ಮಹತ್ತರ ಪಾತ್ರ ವಹಿಸುತ್ತಿದ್ದು ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಪರಿಸರಕ್ಕೆ ದೊಡ್ಡ ಕೊಡುಗೆಯನ್ನು ನೀಡಬಹುದು ಇದ ಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಮರವನ್ನು ಪ್ರೀತಿಯಿಂದ ಆರೈಕೆ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ಲಿಯಾಕತ್ ಅಲಿ, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಮ್ಮ ವಿದ್ಯಾರ್ಥಿಗಳು ಹಲವಾರು ರಚನಾತ್ಮಕ ಕಾರ್ಯಗಳನ್ನು ಕೈಗೊಂಡಿದ್ದಾರೆ. ಪೇಂಟಿಂಗ್ ಮೂಲಕ ಪರಿಸರ ಜಾಗೃತಿ ಮೂಡಿಸುವುದು, ಸಮಾಜದೊಂದಿಗೆ ಸಂಪರ್ಕ ಸಾಧಿಸಿ ಅವರಲ್ಲಿ ಜಾಗೃತಿ ಮೂಡಿಸುವುದು, ವಿವಿಧ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಸಸಿ ನೀಡುವುದರ ಮೂಲಕ ವಿದ್ಯಾರ್ಥಿಗಳು ಪರಿಸರ ಜಾಗೃತಿಯಲ್ಲಿ ತೊಡಗಿಸಿಕೊಂಡರು ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸ್ಥಾಪಕ ಸದಸ್ಯರಾದ ಡಾ.ಕ್ವಾಜಾ ಒವೇಸ್ ರುಕ್ನುದ್ದೀನ್, ಉಪಾಧ್ಯಕ್ಷ ಸೈಯ್ಯದ್ ಖುತುಬ್ ಬರ್ಮಾವರ್ ನದ್ವಿ, ಕಾರ್ಯದರ್ಶಿ ಅನಂ ಅಲಾ ಎಂ.ಟಿ. ಉಪಸ್ಥಿತರಿದ್ದರು.

Similar News