ಸುರಿನಾಮ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Update: 2023-06-06 06:28 GMT

ಪರಮಾರಿಬೊ: ದಕ್ಷಿಣ ಅಮೆರಿಕದ ಸುರಿನಾಮ್ ದೇಶ ತನ್ನ  ಅತ್ಯುನ್ನತ ನಾಗರಿಕ ಗೌರವ 'ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ಆಫ್ ದಿ ಯೆಲ್ಲೊ ಸ್ಟಾರ್' ಎಂಬ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸೋಮವಾರ ಪ್ರದಾನ ಮಾಡಿ ಗೌರವಿಸಿದೆ. ಮುರ್ಮು ಈ ಪ್ರಶಸ್ತಿಯನ್ನು ಪಡೆದುಕೊಂಡ ಮೊದಲ ಭಾರತೀಯರಾಗಿದ್ದಾರೆ.

ಮುರ್ಮು ಅವರು ಸುರಿನಾಮ್ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾಪರ್ಸಾದ್ ಸಂತೋಖಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

"ಸುರಿನಾಮ್ ನ ಅತ್ಯುನ್ನತ ಪ್ರಶಸ್ತಿಯಾದ 'ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೊ ಸ್ಟಾರ್' ಅನ್ನು ಸ್ವೀಕರಿಸಲು ನನಗೆ ಬಹಳ ಗೌರವವಿದೆ. ಈ ಮನ್ನಣೆಯು ನನಗೆ ಮಾತ್ರವಲ್ಲದೆ ನಾನು ಪ್ರತಿನಿಧಿಸುವ ಭಾರತದ ಎಲ್ಲಾ ಜನರಿಗೂ ಕೂಡ ಮಹತ್ತರವಾದ ಮಹತ್ವವನ್ನು ಹೊಂದಿದೆ''ಎಂದು ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.

ವಿದೇಶ ಪ್ರವಾಸದಲ್ಲಿರುವ ಮುರ್ಮು ಜೂ.4ರಂದು ಪರಮಾರಿಬೊಗೆ ಭೇಟಿ ನೀಡಿದ್ದರು.

Similar News