ಮಂಚಿಯಲ್ಲಿ ತ್ಯಾಜ್ಯ ಹಾಕಿದ ವ್ಯಕ್ತಿಗೆ ದಂಡ

Update: 2023-06-06 16:06 GMT

ಉಡುಪಿ, ಜೂ.6: ಉಡುಪಿ ನಗರಸಭಾ ವ್ಯಾಪ್ತಿಯ ಇಂದ್ರಾಳಿ ವಾರ್ಡಿನ ಮಂಚಿ ಎಂಬಲ್ಲಿ ಅನಧಿಕೃತವಾಗಿ ಮಿಶ್ರ ತ್ಯಾಜ್ಯವನ್ನು ಟ್ರ್ಯಾಕ್ಟರ್ ಮೂಲತ ತಂದು ಎಸೆದ ಗುತ್ತಿಗೆದಾರನಿಗೆ ನಗರಸಭೆ 10,000ರೂ. ದಂಡ ವಿಧಿಸಿದ್ದಲ್ಲದೇ, ಆತನಿಂದಲೇ ತ್ಯಾಜ್ಯವನ್ನು ತೆಗೆಸಲಾಗಿದೆ.

ಉಡುಪಿಯ ಚರ್ಚ್‌ನವರು ಕಸವನ್ನು ಹನುಮೇಶ ಎಂಬಾತನಿಗೆ ತೆಗೆಯಲು ಹೇಳಿದ್ದು, ಆತ ತ್ಯಾಜ್ಯವನ್ನು ಸಂಗ್ರಹಿಸಿ ಇಂದ್ರಾಳಿ ವಾರ್ಡಿನ ಮಂಚಿ ಎಂಬಲ್ಲಿ ಹಾಕಿ ಬಂದಿದ್ದ. ಈ ತ್ಯಾಜ್ಯವನ್ನು ತಂದ ಟ್ರ್ಯಾಕ್ಟರ್ ಮೂಲ ತ್ಯಾಜ್ಯದ ಮೂಲವನ್ನು ಪತ್ತೆ ಮಾಡಿ ನಗರಸಭೆಯ ಅಧಿಕಾರಿಗಳು ಹನುಮೇಶನಿಗೆ 10,000ರೂ. ದಂಡ ವಿಧಿಸಿದ್ದಲ್ಲದೇ ಆತನಿಂದಲೇ ಅದನ್ನು ತೆಗೆಸಿದರು.

ಕಾರ್ಯಾಚರಣೆಯಲ್ಲಿ ನಗರಸಭೆಯ ಪರಿಸರ ಇಂಜಿನಿಯರ್, ಹಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನಿಟರಿ ಸೂಪರ್‌ವೈಸರ್ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು.

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು, ಉದ್ದಿಮೆದಾರರು, ವ್ಯಾಪಾರಿಗಳು ತ್ಯಾಜ್ಯವನ್ನು ಕಂಡು ಕಂಡಲ್ಲಿ ಎಸೆಯದೇ, ನಗರಸಭೆಯ ವಾಹನಕ್ಕೆ ನೀಡುವಂತೆ ಕೋರಲಾಗಿದೆ. ತಪ್ಪಿದಲ್ಲಿ ತ್ಯಾಜ್ಯ ಎಸೆದವರ ಮೇಲೆ 25,000ರೂ. ದಂಡ ವಿಧಿಸಿ, ಕಾನೂನು ಕ್ರಮ ಜರಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.

Similar News