ಮಾದಕ ದ್ರವ್ಯ ಸೇವನೆ ಆರೋಪ: ಮೂವರ ಬಂಧನ
Update: 2023-06-06 22:17 IST
ಮಂಗಳೂರು, ಜೂ.6: ನಗರದ ವಿವಿಧೆಡೆ ಬಂದರು ಪೊಲೀಸರು ಸೋಮವಾರ ಮತ್ತು ಮಂಗಳವಾರ ಕಾರ್ಯಾ ಚರಣೆ ನಡೆಸಿ ಮಾದಕ ದ್ರವ್ಯ ಸೇವಿಸುತ್ತಿದ್ದ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರೀತಿನಗರದ ಶ್ರವಣ್ ಕೆ.ಶೆಟ್ಟಿ (18), ಕುದ್ರೋಳಿ ಕಂಡತ್ತ್‌ಪಳ್ಳಿಯ ಮುಹಮ್ಮದ್ ಇಸ್ಮಾಯಿಲ್ (29), ಕುದ್ರೋಳಿ ಕರ್ಬಲಾ ರಸ್ತೆಯ ಮುಹಮ್ಮದ್ ಸಮದ್ ಯಾನೆ ಚಮ್ಮು (48) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.