ನಾವು ನಮ್ಮ ಪ್ರತಿಭಟನೆ ಕೊನೆಗೊಳಿಸುತ್ತಿಲ್ಲ; ಬ್ರಿಜ್ ಭೂಷಣ್ ಬಂಧನವಾಗಲೇಬೇಕು: ಸಾಕ್ಷಿ ಮಲಿಕ್

Update: 2023-06-07 06:31 GMT

ಹೊಸದಿಲ್ಲಿ: ನಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುತ್ತಿಲ್ಲ ಹಾಗೂ ಸರಕಾರವು ನಮಗೆ  ಏನು ನೀಡುತ್ತದೆ ಎಂಬುದನ್ನು ಕಾದು ನೋಡುತ್ತೇವೆ. ಬ್ರಿಜ್ ಭೂಷಣ್ ನನ್ನು ಬಂಧಿಸಬೇಕು. ಸರಕಾರದ ಪ್ರಸ್ತಾವವನ್ನು ನೋಡುತ್ತೇವೆ  ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಕುಸ್ತಿಪಟುಗಳನ್ನು ಮತ್ತೆ ಮಾತುಕತೆಗೆ ಆಹ್ವಾನಿಸಿದ ಕೆಲವೇ ಗಂಟೆಗಳ ನಂತರ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವ ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದರು.

“ನಾವು ನಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುತ್ತಿಲ್ಲ. ಸರಕಾರ ನಮಗೆ ಯಾವ ಪ್ರಸ್ತಾವನೆ ನೀಡುತ್ತದೆ ಎಂಬುದನ್ನು ಕಾದು ನೋಡುತ್ತೇವೆ. ಕುಸ್ತಿ ಫೆಡರೇಷನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಅವರನ್ನು ಬಂಧಿಸಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ''ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದ್ದಾರೆ.

"ಸರಕಾರ ನೀಡಿರುವ ಪ್ರಸ್ತಾವನೆಯನ್ನು ವರಿಷ್ಠರು ಹಾಗೂ ಬೆಂಬಲಿಗರೊಂದಿಗೆ ಚರ್ಚಿಸುತ್ತೇವೆ. ನಾವು ಇಷ್ಟಪಟ್ಟರೆ ನಾವು ಖಾಪ್ ಪಂಚಾಯತ್ ನಾಯಕರೊಂದಿಗೆ ಸರಕಾರದ ಪ್ರಸ್ತಾಪವನ್ನು ಚರ್ಚಿಸುತ್ತೇವೆ. ಪ್ರಸ್ತಾವನೆ ಚೆನ್ನಾಗಿದೆ ಎಂದು ಎಲ್ಲರೂ ಒಪ್ಪಿಗೆ ನೀಡಿದಾಗ ಮಾತ್ರ ನಾವು ಒಪ್ಪುತ್ತೇವೆ. ಸರಕಾರ ಏನು ಹೇಳಿದರೂ ಅದನ್ನು ಒಪ್ಪಿ ನಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಲು  ಆಗುವುದಿಲ್ಲ. ಸಭೆಗೆ ಇನ್ನೂ ಸಮಯ ನಿಗದಿಯಾಗಿಲ್ಲ. ಸರಕಾರದೊಂದಿಗೆ ಬಹಿರಂಗ ಸಭೆಯ ಸಮಯ ಹಾಗೂ  ಸ್ಥಳಕ್ಕಾಗಿ ಕಾಯುತ್ತಿದ್ದೇವೆ. ಏನಾದರೂ ಪರಿಹಾರ ಸಿಗಬಹುದೆಂಬ ಭರವಸೆ ನಮಗಿದೆ ಹಾಗೂ  ಮುಚ್ಚಿದ ಕೋಣೆಯ ಬದಲಿಗೆ ಬಹಿರಂಗವಾಗಿ ಸಭೆ ನಡೆಸಲು ನಾವು ಒತ್ತಾಯಿಸುತ್ತೇವೆ'' ಎಂದು  ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕುಸ್ತಿಪಟುಗಳ ಸಭೆ ಕರೆದಿರು ವ ಕುರಿತಂತೆ ಸಾಕ್ಷಿ  ANIಗೆ ಪ್ರತಿಕ್ರಿಯಿಸಿದರು.

Similar News