ಮಲ್ಪೆ: ಮಾಡಿನಿಂದ ಬಿದ್ದ ಗಾಯಾಳು ಮೃತ್ಯು

Update: 2023-06-07 15:15 GMT

ಮಲ್ಪೆ, ಜೂ.7: ಮಾಡಿನ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ನೇಜಾರಿನ ನಡೆದಿದೆ.

ಮೃತರನ್ನು ತೆಂಕನಿಡಿಯೂರು ಈಶ್ವರನಗರ ನಿವಾಸಿ ವಿಶ್ವನಾಥ (37) ಎಂದು ಗುರುತಿಸಲಾಗಿದೆ. ಇವರು ಎ.18 ರಂದು ನೇಜಾರಿನ ಮೇಘರಾಜ್ ಎಂಬವರ ಮನೆಯ ಮಾಡಿನ ರಿಪೇರಿ ಕೆಲಸ ಮಾಡುವಾಗ ಆಯತಪ್ಪಿ ನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆನ್ನಲಾಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ಇವರು, ಜೂ.6ರಂದು ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News