ಅಲ್-ಇಹ್ಸಾನ್ ಕ್ಯಾಂಪಸ್ಸಿನಲ್ಲಿ ಹಜ್ಜ್ ಪ್ರಾಕ್ಟಿಕಲ್ ಕ್ಲಾಸ್

Update: 2023-06-07 17:30 GMT

ಕಾಪು:  ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧೀನದಲ್ಲಿರುವ ಅಲ್-ಇಹ್ಸಾನ್ ದಅವಾ ಕಾಲೇಜು ಇದರ ರಿಕಾಝುಲ್ ಇಹ್ಸಾನ್ ವಿದ್ಯಾರ್ಥಿ ಸಂಘಟನೆಯ ಆಶ್ರಯದಲ್ಲಿ ಹಜ್ಜ್ ಪ್ರಾಕ್ಟಿಕಲ್ ತರಬೇತಿ ಅಲ್-ಇಹ್ಸಾನ್ ಕ್ಯಾಂಸ್ಸಿನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಸಹ ವ್ಯವಸ್ಥಾಪಕರಾಗಿರುವ ಸಿದ್ದೀಖ್ ಸಅದಿ ಅಧ್ಯಕ್ಷತೆ ವಹಿಸಿದ್ದು ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಪ್ರಧಾನ ಕಾರ್ಯದರ್ಶಿ ವೈ.ಬಿ.ಸಿ ಬಶೀರ್ ಅಲಿ ಉದ್ಘಾಟನೆ ಗೈದರು, ಹಜ್ಜ್ ಪ್ರಾಕ್ಟಿಕಲ್ ತರಬೇತಿ  ಅಲ್-ಇಹ್ಸಾನ್ ದಅವಾ ಕಾಲೇಜು ಪ್ರಾಂಶುಪಾಲರಾದ ಮುಹಮ್ಮದ್ ಸ್ವಾಬಿರ್ ಸಅದಿ ಅಲ್ ಅಸ್ನವೀ ತರಬೇತಿ ಮಂಡಿಸಿದರು.

ಕಾರ್ಯಕ್ರಮದಲ್ಲಿ ಇಬ್ರಾಹಿಂ ಬಾತೀಷ್ ಹಿಮಮಿ ಅಸ್ಸಖಾಫಿ, ಹಾಫೀಳ್ ಮಸ್ರೂರ್ ಸುರೈಜಿ ಸ್ಸಖಾಫಿ ಅಲ್ ವಾರಿಸಿ, ಅಹ್ಮದ್ ಉನೈಸ್ ಅಹ್ಸನಿ, ಹಾಫಿಳ್ ಹಾರಿಸ್ ಸಅದಿ, ಸಲಾಂ ಸಅದಿ, ಅಬ್ದುರ್ರಹ್ಮಾನ್ ಮುಸ್ಲಿಯಾರ್, ಮಾಸ್ಟರ್ ಹಬೀಬುರ್ರಹ್ಮಾನ್, ಮಾಸ್ಟರ್ ಮಹಮ್ಮದ್ ಅನೀಸ್  ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಬ್ದುಲ್ ರಶೀದ್ ಸಅದಿ ಅಲ್-ಅಸ್ನವೀ ಸ್ವಾಗತಿಸಿದರೆ, ಅಬ್ದುಲ್ ಹಮೀದ್ ಅಹ್ಸನಿ ಕೆ.ಸಿ ರೋಡ್ ವಂದಿಸಿದರು. ಆಸಕ್ತರಿಗೆ ಯ್ಯೂಟ್ಯೂಬ್ ಚಾನೆಲ್‍ನಲ್ಲಿ ವೀಕ್ಷಿಸಬಹುದು. ಕಾರ್ಯಕ್ರಮದ ಲಿಂಕ್ www.youtube.com/live/iLdXaYvlloE?feature=share ಎಂದು ಪ್ರಕಟನೆಯಲ್ಲಿ ತಿಳಿಸಿದೆ. 

Similar News