ವಿಶ್ವದ ದುಬಾರಿ ನಗರಗಳ ಪಟ್ಟಿಯಲ್ಲಿ ನ್ಯೂಯಾರ್ಕ್ ಗೆ ಅಗ್ರಸ್ಥಾನ

Update: 2023-06-07 17:38 GMT

ವಾಷಿಂಗ್ಟನ್ : ವಲಸಿಗರಾಗಿ ವಾಸಿಸಲು ವಿಶ್ವದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಅಮೆರಿಕದ ನ್ಯೂಯಾರ್ಕ್ ಅಗ್ರಸ್ಥಾನ ಪಡೆದರೆ, ಇದುವರೆಗೆ ಅಗ್ರಸ್ಥಾನದಲ್ಲಿದ್ದ ಹಾಂಕಾಂಗ್ ಎರಡನೇ ಸ್ಥಾನಕ್ಕೆ ಇಳಿದಿದೆ.

 ಹಣದುಬ್ಬರದ ಪ್ರಮಾಣ ಹೆಚ್ಚಳ ಮತ್ತು ಹೆಚ್ಚುತ್ತಿರುವ ವಸತಿ ವೆಚ್ಚಗಳು ನ್ಯೂಯಾರ್ಕ್ ನಗರವನ್ನು ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ  ತಂದಿರಿಸಿದೆ. ಇಸಿಎ ಇಂಟರ್ನ್ಯಾಷನಲ್ಸ್ನ 2023ರ ‘ಜೀವನವೆಚ್ಚ ಶ್ರೇಯಾಂಕ’ ಪಟ್ಟಿಯಲ್ಲಿ ಸ್ವಿಝರ್ಲ್ಯಾಂಡ್ನ ಜಿನೆವಾ, ಬ್ರಿಟನ್ನ ಲಂಡನ್ ಹಾಗೂ ಸಿಂಗಾಪುರ ಕ್ರಮವಾಗಿ 3, 4 ಮತ್ತು 5ನೇ ಸ್ಥಾನದಲ್ಲಿದೆ. 20 ನಗರಗಳ ಪಟ್ಟಿಯಲ್ಲಿ ಅಮೆರಿಕ ಹಾಗೂ ಚೀನಾ ಪ್ರಾಬಲ್ಯ ಸಾಧಿಸಿದ್ದರೆ, ದುಬಾಯಿ ಮತ್ತು ಅಬುಧಾಬಿಗಳೂ ಸ್ಥಾನಪಡೆದಿವೆ. ಏಶ್ಯಾದ ನಗರಗಳಲ್ಲಿ ಜಪಾನ್ನ ಟೋಕಿಯೊ ಮತ್ತು ದಕ್ಷಿಣ ಕೊರಿಯಾದ ಸಿಯೋಲ್ ನಗರಗಳೂ ಅಗ್ರ 10ರ ಪಟ್ಟಿಯಲ್ಲಿವೆ.

ಸ್ವಿಝರ್ಲ್ಯಾಂಡ್ನ ಝ್ಯೂರಿಚ್ ಮತ್ತು ಬರ್ನ್, ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋ, ಚಿಕಾಗೊ ಮತ್ತು ಲಾಸ್ಏಂಜಲೀಸ್, ಇಸ್ರೇಲ್ನ ಟೆಲ್ಅವೀವ್, ದಕ್ಷಿಣ ಕೊರಿಯಾದ ಸಿಯೋಲ್, ಜಪಾನ್ನ ಟೋಕಿಯೊ, ಚೀನಾದ ಶಾಂಘೈ, ಗ್ವಾಂಗ್ಝೊ, ಶೆನ್ಝೆಹನ್, ಮತ್ತು ಬೀಜಿಂಗ್,   ಯುಎಇಯ ದುಬೈ ಮತ್ತು ಅಬುಧಾಬಿ, ಡೆನ್ಮಾರ್ಕ್ನ ಕೋಪೆನ್ಹಾಗನ್ ಅಗ್ರ 20ರ ಪಟ್ಟಿಯಲ್ಲಿರುವ ಇತರ ನಗರಗಳಾಗಿವೆ.

Similar News