ಆಟದ ವಿಚಾರದಲ್ಲಿ ಜಗಳ: ಬ್ಯಾಟ್‌ನಿಂದ ಹೊಡೆದು ಬಾಲಕನ ಹತ್ಯೆ

Update: 2023-06-08 06:44 GMT

ಚಂದ್ರಾಪುರ(ಮಹಾರಾಷ್ಟ್ರ): ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಕ್ರಿಕೆಟ್ ಆಡುವ ವಿಚಾರದಲ್ಲಿ 13 ವರ್ಷದ ಬಾಲಕನೊಬ್ಬ 12 ವರ್ಷದ ಮತ್ತೊಬ್ಬ ಬಾಲಕನನ್ನು ಕೊಂದಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಜೂನ್ 3 ರಂದು ಈ ಘಟನೆ ನಡೆದಿದ್ದು, 13 ವರ್ಷದ ಬಾಲಕ, ಮತ್ತೊಬ್ಬ ಬಾಲಕನ  ತಲೆಗೆ ಬ್ಯಾಟ್‌ನಿಂದ ಹೊಡೆದಿದ್ದಾನೆ  ಬ್ಯಾಟ್ ನಿಂದ ಏಟು ತಿಂದಿದ್ದ ಬಾಲಕ ನಂತರ ಚಿಕಿತ್ಸೆ ಪಡೆಯುತ್ತಿದ್ದಾಗ ಜೂನ್ 5 ರಂದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಬಾಲಕನ ಕುಟುಂಬದವರು ನಂತರ ಪೊಲೀಸ್ ದೂರು ದಾಖಲಿಸದೆ ಶವವನ್ನು ಹೂಳಿದ್ದರು ಎಂದು ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ಬಾಲಕನ ತಾಯಿ ಮಂಗಳವಾರ ಪೊಲೀಸರನ್ನು ಸಂಪರ್ಕಿಸಿದ್ದು, ಪ್ರಕರಣದ ತನಿಖೆಗಾಗಿ ಬುಧವಾರ ಶವವನ್ನು ಹೊರತೆಗೆಯಲಾಗಿದೆ ಎಂದು ಅವರು ಹೇಳಿದರು.

ಜೂನ್ 3 ರಂದು ಇಲ್ಲಿನ ಬಗಡ್ಕಿಡ್ಕಿ ಪ್ರದೇಶದ ಕೆಲವು ಹುಡುಗರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು.

ಆಟದ ಸಂದರ್ಭದಲ್ಲಿ ಮೃತ ಬಾಲಕನು ಇತರ ಹುಡುಗರೊಂದಿಗೆ ಸ್ವಲ್ಪ ಜಗಳವಾಡಿದ ನಂತರ ಅದರಲ್ಲಿದ್ದ ಬಾಲಕನೊಬ್ಬ  ಬ್ಯಾಟ್‌ನಿಂದ ಹೊಡೆದಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪೆಟ್ಟು ಬಿದ್ದ ಬಾಲಕನು ನೆಲಕ್ಕೆ ಬಿದ್ದನು. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಜೂನ್ 5ರಂದು ಮೃತಪಟ್ಟ ಎಂದು ಪೊಲೀಸರ ತಿಳಿಸಿದರು.

Similar News