ಮಲ್ಪೆ ಬಂದರಿನ ಜಟ್ಟಿ ಮೇಲಿನ ವಿವಿಧ ವಸ್ತುಗಳ ತೆರವಿಗೆ ಸೂಚನೆ

Update: 2023-06-08 15:01 GMT

ಉಡುಪಿ: ಸರಕಾರದ ಆದೇಶದಂತೆ ಈಗಾಗಲೇ ಜೂನ್‌1ರಿಂದ ಜುಲೈ 31ರವರೆಗೆ ಮೀನುಗಾರಿಕಾ ನಿಷೇಧ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಮಲ್ಪೆ ಬಂದರಿನಲ್ಲಿ ಬೆಂಕಿಯಿಂದ ಉಂಟಾಗುವ ಅವಘಡಗಳನ್ನು ತಡೆಯಲು ಅಗ್ನಿಶಾಮಕ ವಾಹನವು ತಿರು ಗಾಡಲು ಅನುಕೂಲ ವಾಗುವಂತೆ ಬಂದರಿನ ಜಟ್ಟಿಯ ಮೇಲಿರುವ ಡಿಂಗಿ, ಬಲೆ, ಪ್ಲಾಸ್ಟಿಕ್ ಕ್ರೇಟ್ಸ್ ಹಾಗೂ ಇತರ ವಸ್ತುಗಳನ್ನು ತೆರವು ಗೊಳಿಸಬೇಕು.

ಜಟ್ಟಿಯ ಮೇಲೆ ನೀರು ಸರಬರಾಜು ಮಾಡುವ ವಾಹನ ಹಾಗೂ ಕ್ರೇನ್‌ಗಳ ಓಡಾಟವನ್ನು ನಿರ್ಬಂಧಿಸಲಾಗಿದ್ದು, ಮೀನುಗಾರಿಕೆ ಇಲಾಖೆಯ ಅನುಮತಿ ಮೇರೆಗೆ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಬೋಟುಗಳ ದುರಸ್ತಿ ಕಾರ್ಯ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮಲ್ಪೆ ಮೀನುಗಾರಿಕೆ ಬಂದರು ಯೋಜನೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Similar News