ದೇಶದಲ್ಲಿ ಈ ವರ್ಷ 50 ಹೊಸ ವೈದ್ಯಕೀಯ ಕಾಲೇಜು: 8 ಸಾವಿರ ಹೆಚ್ಚುವರಿ ಸೀಟು

Update: 2023-06-09 03:36 GMT

ಹೊಸದಿಲ್ಲಿ: ಈ ವರ್ಷ ದೇಶದಲ್ಲಿ 50 ಹೊಸ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಅನುಮೋದನೆ ನೀಡಲಾಗಿದ್ದು, 8195 ಹೆಚ್ಚುವರಿ ಸೀಟುಗಳು ಪದವಿ ಕೋರ್ಸ್ ಗೆ ಲಭ್ಯವಾಗಲಿವೆ. ಇದರೊಂದಿಗೆ ಒಟ್ಟು ಸೀಟುಗಳ ಸಂಖ್ಯೆ 1,07,658ಕ್ಕೇರಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

30 ಸರ್ಕಾರಿ ಹಾಗೂ 20 ಖಾಸಗಿ ವೈದ್ಯಕೀಯ ಕಾಲೇಜುಗಳ ಸೇರ್ಪಡೆಯೊಂದಿಗೆ ದೇಶದ ಒಟ್ಟು ವೈದ್ಯಕೀಯ ಕಾಲೇಜುಗಳ ಸಂಖ್ಯೆ 702 ಆಗಲಿದೆ.

ತೆಲಂಗಾಣ, ರಾಜಸ್ಥಾನ, ತಮಿಳುನಾಡು, ಒಡಿಶಾ, ನಾಗಾಲ್ಯಾಂಡ್, ಮಹಾರಾಷ್ಟ್ರ, ಅಸ್ಸಾಂ, ಕರ್ನಾಟಕ, ಗುಜರಾತ್, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಹೊಸ 50 ಕಾಲೇಜುಗಳು ಕಾರ್ಯಾರಂಭ ಮಾಡಲಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಕಳೆದ ಎರಡೂವರೆ ತಿಂಗಳಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗದ ಪದವಿ ವೈದ್ಯ ಕಾಲೇಜು ಮಂಡಳಿ ತಪಾಸಣೆ ನಡೆಸಿ 38 ಕಾಲೆಜುಗಳ ಮಾನ್ಯತೆ ರದ್ದುಪಡಿಸಿದೆ. 102 ಕಾಲೇಜುಗಳಿಗೆ ಶೋಕಾಸ್ ನೋಟಿಸ್ ನೀಡಿದೆ. ಮಾನ್ಯತೆ ರದ್ದುಗೊಂಡ 38 ಕಾಲೇಜುಗಳ ಪೈಕಿ 24 ಎನ್ಎಂಸಿಗೆ ಮೇಲ್ಮನವಿ ಸಲ್ಲಿಸಿದ್ದರೆ, ಆರು ಆರೋಗ್ಯ ಸಚಿವರನ್ನು ಸಂಪರ್ಕಿಸಿವೆ.

Similar News