ಬಿಪರ್‌ಜಾಯ್ ಚಂಡಮಾರುತ ಮುಂದಿನ 36 ಗಂಟೆಗಳಲ್ಲಿ ತೀವ್ರಗೊಳ್ಳಲಿದೆ: ಐಎಂಡಿ

Update: 2023-06-09 15:44 GMT

ಹೊಸದಿಲ್ಲಿ: ಅರಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ  ಬಿಪರ್‌ಜಾಯ್ ಚಂಡಮಾರುತವು ಮುಂದಿನ 36 ಗಂಟೆಗಳಲ್ಲಿ ತೀವ್ರ ಸ್ವರೂಪವನ್ನು ಪಡೆದುಕೊಳ್ಳಲಿದೆ ಮತ್ತು ಮುಂದಿನ ಎರಡು ದಿನಗಳಲ್ಲಿ ಉತ್ತರ-ವಾಯುವ್ಯ ದಿಕ್ಕಿನಲ್ಲಿ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD)ಯು ಶುಕ್ರವಾರ ಟ್ವೀಟ್ ನಲ್ಲಿ  ತಿಳಿಸಿದೆ.

ಅತ್ಯಂತ ತೀವ್ರವಾದ ಬಿಪರ್‌ಜಾಯ್ ಚಂಡಮಾರುತವು ಜೂ.8ರಂದು ರಾತ್ರಿ 11:30 ಗಂಟೆಗೆ ಗೋವಾದ ಪಶ್ಚಿಮ-ನೈಋತ್ಯಕ್ಕೆ ಸುಮಾರು 840 ಕಿ.ಮೀ.,ಮುಂಬೈನ ಪಶ್ಚಿಮ-ನೈಋತ್ಯಕ್ಕೆ 870 ಕಿ.ಮೀ.ದೂರದಲ್ಲಿ ಪೂರ್ವ-ಮಧ್ಯ ಅರಬಿ ಸಮುದ್ರದ ಮೇಲೆ ಸ್ಥಿತಗೊಂಡಿತ್ತು ಎಂದು ಐಎಂಡಿ ತಿಳಿಸಿದೆ.

ಅರಬಿ ಸಮುದ್ರದಲ್ಲಿ ಚಂಡಮಾರುತವಿರುವ ಪ್ರದೇಶಗಳಿಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿರುವ ಐಎಂಡಿ, ಈಗಾಗಲೇ ಮೀನುಗಾರಿಕೆಗಾಗಿ ಸಮುದ್ರದಲ್ಲಿರುವವರು ತೀರಕ್ಕೆ ಮರಳುವಂತೆ ಸೂಚಿಸಿದೆ.

Similar News