‘ಎರಡು ರಾಷ್ಟ್ರ’ ಪರಿಹಾರಕ್ಕೆ ಬದ್ಧವಾಗಿರಿ: ಇಸ್ರೇಲ್ ಗೆ ಅಮೆರಿಕ ಆಗ್ರಹ

Update: 2023-06-09 17:22 GMT

ವಾಷಿಂಗ್ಟನ್: ಫೆಲೆಸ್ತೀನ್ ದೇಶ ಸ್ಥಾಪನೆಯ ಅವಕಾಶಕ್ಕೆ ಅಡ್ಡಿಯಾಗಬಾರದು ಮತ್ತು ಆಕ್ರಮಿತ ಪಶ್ಚಿಮದಂಡೆ ಸೇರಿದಂತೆ ಇತರ ಪ್ರದೇಶಗಳಲ್ಲಿ ಶಾಂತಿಸ್ಥಾಪನೆಯ ನಿಟ್ಟಿನಲ್ಲಿ ಪೂರಕವಾಗಿ ಸ್ಪಂದಿಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಆಗ್ರಹಿಸಿದ್ದಾರೆ.

ಶಾಂತಿ ಮಾತುಕತೆಗೆ ವೇದಿಕೆ ರೂಪಿಸುವ ಬಗ್ಗೆ ಸೌದಿ ಅರೆಬಿಯಾದ ಜತೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಬ್ಲಿಂಕೆನ್, ಇಸ್ರೇಲ್ ಪ್ರಧಾನಿಗೆ ದೂರವಾಣಿ ಕರೆ ಮಾಡಿ ‘ಈ ಪ್ರದೇಶದಲ್ಲಿನ ದೇಶಗಳ ಜತೆಗಿನ ವ್ಯವಹಾರವನ್ನು ಸಾಮಾನ್ಯೀಕರಣಗೊಳಿಸಲು ಇಸ್ರೇಲ್ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲರ್ ಹೇಳಿದ್ದಾರೆ.

‘ಎರಡು ರಾಷ್ಟ್ರ ಪರಿಹಾರದ ನಿರೀಕ್ಷೆಗಳನ್ನು ದುರ್ಬಲಗೊಳಿಸುವ ಕ್ರಮಗಳನ್ನು ತಪ್ಪಿಸಲು ಅಕಾಬಾ ಮತ್ತು ಶರ್ಮೆಲ್ ಶೇಖ್ಗಳಲ್ಲಿ ನಡೆದ ಪ್ರಾದೇಶಿಕ ಸಭೆಗಳಲ್ಲಿ ಮಾಡಿದ ಬದ್ಧತೆಗಳನ್ನು ಎತ್ತಿಹಿಡಿಯುವಂತೆ ಬ್ಲಿಂಕೆನ್ ಆಗ್ರಹಿಸಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವರದಿ ಮಾಡಿದೆ.

Similar News