ಮುಖಾಮುಖಿಯಾದ ಎರಡು ಪ್ರಯಾಣಿಕ ವಿಮಾನಗಳು: ತಪ್ಪಿದ ಭಾರೀ ದುರಂತ

Update: 2023-06-10 08:17 GMT

ಟೋಕಿಯೊ: ಟ್ಯಾಕ್ಸಿ ದಾರಿಯಲ್ಲಿ ಎರಡು ಪ್ರಯಾಣಿಕ ವಿಮಾನಗಳು ಮುಖಾಮುಖಿಯಾಗಿರುವುದರಿಂದ ಟೋಕಿಯೋದ ಹನೇಡಾ ವಿಮಾನ ನಿಲ್ದಾಣದ ಒಂದು ರನ್‌ವೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಈ ಅವಘಡದಲ್ಲಿ ಯಾವುದೇ ಗಾಯಗಳಾಗಲಿ ಅಥವಾ ಹಾನಿಯಾಗಲಿ ಸಂಭವಿಸಿಲ್ಲ ಎಂದು ಜಪಾನ್ ಸಾರಿಗೆ ಸಚಿವಾಲಯ ತಿಳಿಸಿದೆ ಎಂದು indiatoday.com ವರದಿ ಮಾಡಿದೆ.

ಈ ಘಟನೆಯು ಸ್ಥಳೀಯ ಸಮಯವಾದ ಬೆಳಗ್ಗೆ 11 ಗಂಟೆಗೆ ಸಂಭವಿಸಿದ್ದು, ಇದರಲ್ಲಿ ಥಾಯ್ ಏರ್‌ವೇಸ್ ಹಾಗೂ ತೈವಾನ್ ಈವಾ ಏರ್‌ವೇಸ್ ಸಂಸ್ಥೆಗಳು ಕಾರ್ಯಾಚರಿಸುವ ಎರಡು ವಾಣಿಜ್ಯ ವಿಮಾನಗಳು ಮುಖಾಮುಖಿಯಾಗಿವೆ ಎಂದು ಜಪಾನ್ ಸಾರಿಗೆ ಸಚಿವಾಲಯ ಹಾಗೂ ಟೋಕಿಯೊ ಅಗ್ನಿಶಾಮಕ ಇಲಾಖೆ ಹೇಳಿವೆ.

ಈ ಅವಘಡದ ಕಾರಣಕ್ಕೆ ನಾಲ್ಕು ರನ್‌ವೇಗಳನ್ನು ಹೊಂದಿರುವ ಹನೇಡಾ ವಿಮಾನ ನಿಲ್ದಾಣದಲ್ಲಿನ ರನ್‌ವೇ ಎ ಅನ್ನು ಮುಚ್ಚಲಾಗಿದೆ.

NHK ಸುದ್ದಿ ಸಂಸ್ಥೆ ಪ್ರಸಾರ ಮಾಡಿರುವ ತುಣುಕಿನಲ್ಲಿ ಟ್ಯಾಕ್ಸಿ ದಾರಿಯಲ್ಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಗಳು ನೆರೆದಿದ್ದು, ಎರಡು ಪ್ರಯಾಣಿಕ ವಿಮಾನಗಳು ರನ್‌ವೇಯಲ್ಲಿ ನಿಂತಿರುವುದು ಕಂಡು ಬಂದಿದೆ. 

ವಿಮಾನಗಳ ಕಾರ್ಯಾಚರಣೆಯಲ್ಲಿ ವಿಳಂಬವಾಗಲಿದೆ ಎಂದು ಸ್ಥಳೀಯ ಮಾಧ್ಯಮಗಳೂ ವರದಿ ಮಾಡಿವೆ.

Similar News