×
Ad

ಸ್ಯಾಕ್ಸೋಫೋನ್ ವಾದಕ ಸುಂದರ ಸೇರಿಗಾರ್ ನಿಧನ

Update: 2023-06-14 18:14 IST

ಉಡುಪಿ, ಜೂ.14: ಉಡುಪಿಯ ಖ್ಯಾತ ಸ್ಯಾಕ್ಸೋಫೋನ್ ವಾದಕ ಮೂಡು ಅಲೆವೂರು ನಿವಾಸಿ ಸುಂದರ ಸೇರಿಗಾರ್ (76) ಬುಧವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಇವರ ಕಲಾಸೇವೆಯನ್ನು ಪರಿಗಣಿಸಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶ್ರೇಷ್ಠ ಕಲಾ ಶಿಕ್ಷಕ ಪ್ರಶಸ್ತಿಗೂ ಇವರಪು ಭಾಜನರಾಗಿ ದ್ದರು. ಅಲ್ಲದೆ ಹತ್ತು ಹಲವು ಸಂಘಟನೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ.

ಸ್ಯಾಕ್ಸೊಫೋನ್ ವಾದಕರಾಗಿ ದೇಶ ವಿದೇಶಗಳಲ್ಲಿ ಪ್ರಸಿದ್ಧರಾಗಿದ್ದ ಇವರು ಸ್ಯಾಕ್ಸೊಫೋನ್ ಕಲಾ ತರಗತಿ ಯನ್ನು ಆರಂಭಿಸಿ, ಸಾವಿರಾರು ಮಂದಿ ಶಿಷ್ಯರಿಗೆ ಕಲೆಯನ್ನು ಧಾರೆ ಎರೆದಿದ್ದಾರೆ. ಹೆಣ್ಣು ಮಕ್ಕಳಿಗೆ ಪ್ರಪ್ರಥಮ ಬಾರಿ ಸ್ಯಾಕ್ಸೋ ಫೋನ್ ಕಲೆಯನ್ನು ಕಲಿಸಿದ ಕೀರ್ತಿ ಇವರದ್ದಾಗಿದೆ.

ಕರ್ನಾಟಕ, ಕೇರಳ, ತಮಿಳುನಾಡು, ಹೈದರಾಬಾದ್, ಗೋವಾ, ಮುಂಬೈ ಸೇರಿದಂತೆ ದೇಶ ವಿದೇಶಗಳಲ್ಲಿ ತಮ್ಮ ಕಛೇರಿ ನೀಡಿ ಜನಪ್ರಿಯತೆ ಗಳಿಸಿದ್ದರು. ಉಡುಪಿ ಶ್ರೀಕೃಷ್ಣ ಮಠ, ಮೂಡು ಅಲೆವೂರು, ಪಡು ಅಲೆವೂರು ದೇವಸ್ಥಾನ, ಬೆಣ್ಣೆಕುದ್ರು, ಕುಂಜಾರು, ಕಳತ್ತೂರು, ಹೆರ್ಗ, ಪರೀಕ ಸೇರಿದಂತೆ ಹಲವು ದೇವಾಲಯಗಳ ಉತ್ಸವ ಸಂದರ್ಭಗಳಲ್ಲಿ ಕಲಾ ಸೇವೆಗೈದಿದ್ದಾರೆ. ಇವರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Similar News