ವಿಶ್ವದ ಶ್ರೇಷ್ಠ ಶಾಲೆ ಪ್ರಶಸ್ತಿ: ಟಾಪ್ 10ರ ಪಟ್ಟಿಯಲ್ಲಿ ಭಾರತದ 5 ಶಾಲೆಗಳು
Update: 2023-06-15 22:11 IST
ಲಂಡನ್: ವಿಶ್ವದ ಶ್ರೇಷ್ಠ ಶಾಲೆ ಪ್ರಶಸ್ತಿಗಾಗಿನ ಟಾಪ್ 10ರ ಪಟ್ಟಿಯಲ್ಲಿ ಗುರುವಾರ ದಿಲ್ಲಿ, ಗುಜರಾತ್ ಮತ್ತು ಮಹಾರಾಷ್ಟ್ರದ ಐದು ಭಾರತೀಯ ಶಾಲೆಗಳು ವಿವಿಧ ವಿಭಾಗಗಳಲ್ಲಿ ಸ್ಥಾನ ಪಡೆದಿವೆ. ಇದು ಎರಡನೇ ವರ್ಷದ ಪ್ರಶಸ್ತಿಯಾಗಿದೆ. ಒಟ್ಟು 2,50,000 ಡಾಲರ್ (ಸುಮಾರು 2.05 ಕೋಟಿ ರೂಪಾಯಿ) ಮೊತ್ತದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಸಮಾಜದ ಪ್ರಗತಿಗೆ ಜಗತ್ತಿನಾದ್ಯಂತದ ಶಾಲೆಗಳು ನೀಡುವ ದೇಣಿಗೆಯನ್ನು ಸಂಭ್ರಮಿಸುವುದಕ್ಕಾಗಿ ಬ್ರಿಟನ್ ನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
10ರ ಕಿರುಪಟ್ಟಿಗೆ ಆಯ್ಕೆಯಾಗಿರುವ ಭಾರತೀಯ ಶಾಲೆಗಳು: ದಿಲ್ಲಿಯ ಸರಕಾರಿ ಶಾಲೆ ನಗರ ನಿಗಮ ಪ್ರತಿಭಾ ಬಾಲಿಕಾ ವಿದ್ಯಾಲಯ, ಮುಂಬೈಯ ಒಬೆರಾಯ್ ಇಂಟರ್ನ್ಯಾಶನಲ್ ಸ್ಕೂಲ್, ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ದ ರಿವರ್ಸೈಡ್ ಸ್ಕೂಲ್, ಮಹಾರಾಷ್ಟ್ರದ ಅಹ್ಮದ್ ಗರದಲ್ಲಿರುವ ಸ್ನೇಹಾಲಯ ಇಂಗ್ಲಿಷ್ ಮೀಡಿಯಮ್ ಸ್ಕೂಲ್ ಮತ್ತು ಮುಂಬೈಯ ಶಿಂದೆವಾಡಿ ಮುಂಬೈ ಪಬ್ಲಿಕ್ ಸ್ಕೂಲ್ ಸೇರಿದೆ.