×
Ad

ಸಿರಿಯಾಕ್ಕೆ 920 ದಶಲಕ್ಷ ಡಾಲರ್ ನೆರವು ಘೋಷಿಸಿದ ಅಮೆರಿಕ

Update: 2023-06-16 00:01 IST

ವಾಷಿಂಗ್ಟನ್: ಸಿರಿಯಾಕ್ಕೆ ಹೆಚ್ಚುವರಿಯಾಗಿ 920 ದಶಲಕ್ಷ ಡಾಲರ್ ಮಾನವೀಯ ನೆರವು ಒದಗಿಸುವುದಾಗಿ ಅಮೆರಿಕ ಗುರುವಾರ ಘೋಷಿಸಿದೆ. 

ಬ್ರಸೆಲ್ಸ್ ನಲ್ಲಿ ಗುರುವಾರ ನಡೆದ ‘ನೆರವು ಸಂಗ್ರಹ ಸಮಾವೇಶ’ದಲ್ಲಿ ಅಮೆರಿಕದ ಹೆಚ್ಚುವರಿ ನೆರವನ್ನು ಘೋಷಿಸಲಾಗಿದೆ. ಇದರೊಂದಿಗೆ ಸಿರಿಯಾ ಮತ್ತು ವಲಯಕ್ಕೆ ಈ ವರ್ಷ ಅಮೆರಿಕದಿಂದ   1.1 ಶತಕೋಟಿ ಡಾಲರ್ ನೆರವು, ಸಿರಿಯಾದಲ್ಲಿ ಸಂಘರ್ಷ ಆರಂಭವಾದಂದಿನಿಂದ 16.9 ಶತಕೋಟಿ ಡಾಲರ್ ಮಾನವೀಯ ನೆರವು ಒದಗಿಸಿದಂತಾಗುತ್ತದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.

Similar News