×
Ad

ಗುಜರಾತ್ ಚಂಡಮಾರುತ: ನಾಲ್ಕು ದಿನಗಳ ಮಗುವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ಮಹಿಳಾ ಪೊಲೀಸ್

Update: 2023-06-16 10:59 IST

ಹೊಸದಿಲ್ಲಿ: 'ಅತ್ಯಂತ ತೀವ್ರ' ವಾದ ಚಂಡಮಾರುತ ಬೈಪರ್‌ಜೋಯ್‌ಗೆ ತತ್ತರಿಸಿದ ಗುಜರಾತ್‌ನ ಬರ್ದಾ ಡುಂಗರ್‌ನಲ್ಲಿ ನಾಲ್ಕು ದಿನಗಳ ಹಿಂದೆ ಜನಿಸಿದ್ದ ಮಗು ಹಾಗೂ ಹೆತ್ತ ತಾಯಿಯನ್ನು ಇಂದು ರಾಜ್ಯ ಪೊಲೀಸರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

ಗುಜರಾತ್‌ನ ಅರಣ್ಯ ಮತ್ತು ಪರಿಸರ ಸಚಿವ ಮುಲು ಅಯರ್ ಬೇರಾ ಅವರು ಸ್ಥಳೀಯ ಸುದ್ದಿ ವಾಹಿನಿಯೊಂದರಿಂದರ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ತನ್ನ ತೋಳುಗಳಲ್ಲಿ ನವಜಾತ ಶಿಶುವನ್ನು ಎತ್ತಿಕೊಂಡು ಹೋಗುತ್ತಿರುವಾಗ ತಾಯಿ ಮತ್ತು ಹಲವಾರು ಮಹಿಳೆಯರು ಸುರಕ್ಷಿತ ಪ್ರದೇಶಗಳಿಗೆ ಹೋಗುತ್ತಿರುವುದು ಕಂಡುಬಂದಿದೆ.

"ಭನ್ವಾಡ್ ಆಡಳಿತವು ಸೇವೆಯ ಮೂಲಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಎಚ್ಚರಿಕೆಯಿಂದ ವರ್ತಿಸುತ್ತಿದೆ" ಎಂದು ರಾಜ್ಯ ವಿಧಾನಸಭೆಯಲ್ಲಿ ಭನ್ವಾಡ್ ಕ್ಷೇತ್ರವನ್ನು ಪ್ರತಿನಿಧಿಸುವ ಬೇರಾ ಅವರು ವೀಡಿಯೊದೊಂದಿಗೆ ಟ್ವೀಟ್ ಮಾಡಿದ್ದಾರೆ.

ಗುರುವಾರ ಗುಜರಾತ್‌ನಲ್ಲಿ ಬೈಪರ್‌ಜೋಯ್ ಚಂಡಮಾರುತ ಅಪ್ಪಳಿಸಿದ್ದರಿಂದ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 22 ಮಂದಿ ಗಾಯಗೊಂಡಿದ್ದಾರೆ. ಆದರೆ ವಿದ್ಯುತ್ ಕಂಬಗಳು ಮತ್ತು ಮರಗಳು ನೆಲಕ್ಕುರುಳಿವೆ. ಚಂಡಮಾರುತವು ಇಂದು ಸಂಜೆ ರಾಜಸ್ಥಾನದ ಮೇಲೆ ವಾಯುಭಾರ ಕುಸಿತವಾಗಿ ದುರ್ಬಲಗೊಳ್ಳುವ ಸಾಧ್ಯತೆಯಿದೆ.

Similar News