×
Ad

ಒಂದೇ ಗುಂಪಿನಲ್ಲಿ ತಮಿಳುನಾಡು, ಕರ್ನಾಟಕ

Update: 2023-06-18 23:44 IST

ಬೆಂಗಳೂರು: ಕರ್ನಾಟಕ ಹಾಗೂ ತಮಿಳುನಾಡು ಮುಂದಿನ ಆವೃತ್ತಿಯ 2024ರ ಜನವರಿ 5ರಿಂದ ಮಾರ್ಚ್ 14ರ ತನಕ ನಡೆಯುವ ರಣಜಿ ಟ್ರೋಫಿಯಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.

ಬಿಸಿಸಿಐನ ಗೇಮ್ ಡೆವಲಪ್‌ಮೆಂಟ್‌ನ
ಪ್ರಧಾನ ಪ್ರಬಂಧಕ ಅಬೆ ಕುರುವಿಲ್ಲಾ ಅವರು ಶನಿವಾರ ಸಂಜೆ ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ದೇಶೀಯ  ಕ್ರಿಕೆಟ್ ಟೂರ್ನಮೆಂಟ್‌ನ ವಿವರವಾದ ವೇಳಾಪಟ್ಟಿಯನ್ನು ಹಂಚಿಕೊಂಡಿದ್ದಾರೆ.

ಕಳೆದ ಋತುವಿನ ಸಂಬಂಧಿತ ಟೂರ್ನಮೆಂಟ್‌ಗಳ ಪ್ರದರ್ಶನದ ಆಧಾರದಲ್ಲಿ ಎಲ್ಲ ಹಳೆಯ ಟೂರ್ನಮೆಂಟ್‌ನ ಗ್ರೂಪ್‌ಗಳನ್ನು ರಚಿಸಲಾಗಿದೆ. ಇದರ ಪರಿಣಾಮವಾಗಿ ಕಳೆದ ಬಾರಿಯ ಸೆಮಿ ಫೈನಲಿಸ್ಟ್ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಡಿ ಗುಂಪಿನಲ್ಲಿ ಪಂಜಾಬ್, ರೈಲ್ವೇಸ್, ಗೋವಾ, ಗುಜರಾತ್, ತ್ರಿಪುರ ಹಾಗೂ ಚಂಡಿಗಡದೊಂದಿಗೆ ಸ್ಥಾನ ಪಡೆದಿವೆೆ.

ಹಾಲಿ ಚಾಂಪಿಯನ್ ಸೌರಾಷ್ಟ್ರ ಹಾಗೂ ಮಹಾರಾಷ್ಟ್ರ ತಂಡಗಳು ಮತ್ತೊಮ್ಮೆ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ.  ಮುಂಬೈ ತಂಡವು ಬಿ ಗುಂಪಿನಲ್ಲಿ ಬಂಗಾಳ, ಆಂಧ್ರ, ಕೇರಳ, ಛತ್ತೀಸ್‌ಗಢ, ಉತ್ತರಪ್ರದೇಶ,
ಅಸ್ಸಾಂ ಹಾಗೂ ಬಿಹಾರ ತಂಡದೊಂದಿಗೆ ಸ್ಥಾನ ಪಡೆದಿದೆ.

Similar News