ಬಿಸಿಗಾಳಿಯಿಂದ ಹೆಚ್ಚು ಬಾಧಿತವಾಗಿರುವ ರಾಜ್ಯಗಳಿಗೆ ಐವರು ಸದಸ್ಯರ ಆರೋಗ್ಯ ಸಚಿವಾಲಯದ ತಂಡ ಭೇಟಿ: ಮಾಂಡವೀಯ
Update: 2023-06-20 14:30 IST
ಹೊಸದಿಲ್ಲಿ: ಹಲವಾರು ರಾಜ್ಯಗಳು ತೀವ್ರ ಬಿಸಿಗಾಳಿಯಿಂದ ತತ್ತರಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ ಸನ್ನದ್ಧತೆಯನ್ನು ಪರಿಶೀಲಿಸಲು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇಂದು ಉನ್ನತ ಮಟ್ಟದ ಸಭೆ ನಡೆಸಿದರು.
ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳ ನೇತೃತ್ವದ ಐದು ಸದಸ್ಯರ ತಂಡವು ಶಾಖದ ಅಲೆಯಿಂದ ಹೆಚ್ಚು ಪೀಡಿತ ರಾಜ್ಯಗಳಿಗೆ ಭೇಟಿ ನೀಡಲಿದೆ ಎಂದು ಮನ್ಸುಖ್ ಮಾಂಡವಿಯಾ ಹೇಳಿದರು.
"ಸಾಮಾನ್ಯ ಜನ ಜೀವನದ ರಕ್ಷಣೆಗಾಗಿ ಪ್ರತಿ ಹಂತದಲ್ಲೂ ವ್ಯವಸ್ಥೆಗಳನ್ನು ಮಾಡಲಾಗುವುದು. ಯಾರೂ ಶಾಖದಿಂದ ಸಾವನ್ನಪ್ಪದಂತೆ ನಾವು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ" ಎಂದು ಮಾಂಡವಿಯಾ ಹೇಳಿದರು.
ಹವಾಮಾನ ಸಂಸ್ಥೆಯು ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಮಧ್ಯಪ್ರದೇಶ, ಜಾರ್ಖಂಡ್, ವಿದರ್ಭ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತೀವ್ರ ಮತ್ತು ತೀವ್ರತರವಾದ ಶಾಖದ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಿದೆ.