×
Ad

ಹಿಂದೂಗಳು ಮಾತ್ರ ಇಲ್ಲಿ ಬರಬಹುದು: ಗಂಗಾನದಿ ಆವರಣದಿಂದ ಮುಸ್ಲಿಂ ಕುಟುಂಬವನ್ನು ಓಡಿಸಿದ ವಿಡಿಯೊ ವೈರಲ್

Update: 2023-06-21 12:25 IST

ಹರಿದ್ವಾರ: ಕೇವಲ ಹಿಂದೂಗಳು ಮಾತ್ರ ಈ ಪವಿತ್ರ ಗಂಗಾನದಿ ಆವರಣಕ್ಕೆ ಬರಬಹುದು ಎಂದು ಹೇಳಿ, ಮುಸ್ಲಿಂ ಕುಟುಂಬವನ್ನು ಗಂಗಾ ಘಾಟ್‍ನಿಂದ ಓಡಿಸಿದ ಆಘಾತಕಾರಿ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರಾಖಂಡದ ಮಹಾರಾಜ ಅಗ್ರಸೇನ ಘಾಟ್‍ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮುಸ್ಲಿಂ ವ್ಯಕ್ತಿ ಹಾಗೂ ಮಹಿಳೆಯೊಬ್ಬರ ಜತೆ ವಾಗ್ವಾದ ಮಾಡುತ್ತಿರುವ ವ್ಯಕ್ತಿಯೊಬ್ಬ, ಅವರನ್ನು ತಕ್ಷಣ ಈ ಗಂಗಾಘಾಟ್‍ನಿಂದ ತೆರಳುವಂತೆ ಸೂಚಿಸುತ್ತಿರುವುದು ವಿಡಿಯೊದಲ್ಲಿ ಕೇಳಿ ಬರುತ್ತಿದೆ.

ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಗುಂಪೊಂದು ಆ ವ್ಯಕ್ತಿಯ ಮನವೊಲಿಸುವ ಪ್ರಯತ್ನ ಮಾಡಿದರೂ, ಆತ ಮಾತ್ರ ಪದೇ ಪದೇ ಅಲ್ಲಿಂದ ತೆರಳುವಂತೆ ಮುಸ್ಲಿಂ ಕುಟುಂಬಕ್ಕೆ ಸೂಚಿಸುತ್ತಿರುವುದು ಕಂಡುಬಂದಿದೆ. ಈ ಘಟನೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಅಧೀಕ್ಷಕ ಸ್ವತಂತ್ರ ಕುಮಾರ್ ಹೇಳಿದ್ದಾರೆ.

Similar News