×
Ad

ಹೈಸ್ಪೀಡ್ ರೈಲಿನಿಂದ ಪ್ಲಾಟ್‌ಫಾರ್ಮ್ ಮೇಲೆ ಬಿದ್ದ ವ್ಯಕ್ತಿ ಪವಾಡಸದೃಶ ಪಾರು; ವೀಡಿಯೊ ವೈರಲ್

Update: 2023-06-21 12:55 IST

ಹೊಸದಿಲ್ಲಿ: ಹೈಸ್ಪೀಡ್ ರೈಲಿನಿಂದ ಪ್ಲಾಟ್‌ಫಾರ್ಮ್ ಮೇಲೆ ಬಿದ್ದ ವ್ಯಕ್ತಿಯೊಬ್ಬ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ. ಘಟನೆಯ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗಂಟೆಗೆ 110 ಕಿ.ಮೀ.  ವೇಗದಲ್ಲಿ ಬರುತ್ತಿದ್ದ ಪಾಟ್ಲಿಪುತ್ರ ಎಕ್ಸ್‌ಪ್ರೆಸ್‌ನಿಂದ ವ್ಯಕ್ತಿಯೊಬ್ಬರು ಶಹಜಹಾನ್‌ಪುರರೈಲು ನಿಲ್ದಾಣದ  ಪ್ಲಾಟ್‌ಫಾರ್ಮ್ ಮೇಲೆ ಬಿದ್ದಿರುವ ಆಘಾತಕಾರಿ ಘಟನೆ ನಡೆದಿದೆ.

ರೈಲಿನಿಂದ ಬಿದ್ದ ನಂತರ ವ್ಯಕ್ತಿ ಪ್ಲಾಟ್‌ಫಾರ್ಮ್‌ನಲ್ಲಿ ಹಲವಾರು ಅಡಿಗಳವರೆಗೆ ಜಾರಿಕೊಂಡು ಹೋಗಿದ್ದು, ಇತರ ಪ್ರಯಾಣಿಕರು ಈ ನಾಟಕೀಯ ಘಟನೆಯನ್ನು  ನಿಬ್ಬೆರಗಾಗಿ ನೋಡುತ್ತಿದ್ದರು

ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿ ಎದ್ದುನಿಂತು ನಡೆದುಕೊಂಡು ಹೋಗಿದ್ದು, ಆತನಿಗೆ  ಗಾಯ ಕೂಡ ಆಗಿಲ್ಲ ಎಂದು ವರದಿಯಾಗಿದೆ. ಚಲಿಸುತ್ತಿದ್ದ ರೈಲಿನಿಂದ ಪ್ಲಾಟ್‌ಫಾರ್ಮ್‌ಗೆ ವ್ಯಕ್ತಿ ಹೇಗೆ ಬಿದ್ದಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ.

Similar News