×
Ad

ವಿಶ್ವದಾಖಲೆ ಬರೆದ ವಿಶ್ವಸಂಸ್ಥೆ ಪ್ರಧಾನ ಕಚೇರಿಯ ಯೋಗ ದಿನಾಚರಣೆ

Update: 2023-06-21 23:24 IST

ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆದ ಯೋಗ ದಿನಾಚರಣೆ ಕಾರ್ಯಕ್ರಮ ಗಿನ್ನೆಸ್ ವಿಶ್ವದಾಖಲೆಗೆ ಪಾತ್ರವಾಗಿದೆ.

ಅಮೆರಿಕಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮ ‘ಯೋಗ ಅಧಿವೇಶನವೊಂದರಲ್ಲಿ ಅತ್ಯಧಿಕ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡ’ ಗಿನ್ನೆಸ್ ವಿಶ್ವದಾಖಲೆ ಬರೆದಿದೆ. ಕಾರ್ಯಕ್ರಮದಲ್ಲಿ ಮೋದಿಯ ಜತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನದ ಅಧ್ಯಕ್ಷ  ಸಿಸಾಬ ಕೊರಿಸಿ, ಸಹಾಯಕ ಪ್ರಧಾನ ಕಾರ್ಯದರ್ಶಿ ಆಮಿನಾ ಮುಹಮ್ಮದ್, ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಆಡಮ್ಸ್, ವಿಶ್ವಸಂಸ್ಥೆಯ ಇತರ ಅಧಿಕಾರಿಗಳು, ರಾಜತಾಂತ್ರಿಕರು, ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದರು.  ಗಿನ್ನೆಸ್ ವಿಶ್ವದಾಖಲೆಗಳ ಅಧಿಕೃತ ತೀರ್ಪುಗಾರ ಮೈಕೆಲ್ ಎಂಪ್ರಿಕ್ ಗಿನ್ನೆಸ್ ದಾಖಲೆಯ ಪ್ರಮಾಣಪತ್ರವನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್‌ಗೆ ಹಸ್ತಾಂತರಿಸಿದರು.

Similar News