×
Ad

ಮುಂಬೈ : ಲಿಫ್ಟ್ ಕುಸಿದು ಬಿದ್ದು ಕನಿಷ್ಠ 9 ಮಂದಿಗೆ ಗಾಯ

Update: 2023-06-21 23:39 IST

 ಮುಂಬೈ: ಇಲ್ಲಿನ ಗಗನಚುಂಬಿ ಕಟ್ಟಡವೊಂದರಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ಲಿಫ್ಟ್‌ಅವಘಡದಲ್ಲಿ ಕನಿಷ್ಠ 9 ಮಂದಿ ಗಾಯಗೊಂಡಿದ್ದಾರೆ.

ಲೋವರ್ ಪರೇಲ್‌ನ ಕಮಲಾ ಮಿಲ್ಸ್ ಪ್ರದೇಶದಲ್ಲಿ ಟ್ರೇಡ್‌ವರ್ಲ್ಡ್ ವಾಣಿಜ್ಯ ಸಂಕೀರ್ಣದಲ್ಲಿ ಚಲಿಸುತ್ತಿದ್ದ ಲಿಫ್ಟೊಂದು ನಾಲ್ಕನೇ ಅಂತಸ್ತಿನಿಂದ ತಳಅಂತಸ್ತಿಗೆ ಅಪ್ಪಳಿಸಿದೆ. ಈ ವಾಣಿಜ್ಯ ಸಂಕೀರ್ಣದಲ್ಲಿ ಹಲವಾರು ಕಾರ್ಪೊರೇಟ್‌ಕಚೇರಿಗಳು ಹಾಗೂ ಪ್ರಮುಖ ರೆಸ್ಟಾರೆಂಟ್‌ಗಳು ಕಾರ್ಯನಿರ್ವಹಿಸುತ್ತಿವೆ.

17 ಅಂತಸ್ತುಗಳ ಈ ಕಟಡದಲ್ಲಿ ಬೆಳಗ್ಗೆ 11:00 ಗಂಟೆಗೆ ಈ ಅವಘಡ ಸಂಭವಿಸಿದೆ. ಘಟನೆ ನಡೆದಾಗ ಕನಿಷ್ಠ 11 ಮಂದಿ ಲಿಫ್ಟ್‌ನೊಳಗಿದ್ದರು ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಮೂಲಗಳು ತಿಳಿಸಿವೆ.

ಲಿಫ್ಟ್‌ನ ರಕ್ಷಣಾ ಸಿಬ್ಬಂದಿ, ಅಪಘಾತಕ್ಕೀಡಾದ ಲಿಫ್ಟ್‌ನಿಂದ ಎಲ್ಲಾ ಮಂದಿಯನ್ನು ಪಾರು ಮಾಡಿದ್ದಾರೆ. ಲಿಫ್ಟ್‌ನಲ್ಲಿದ್ದವರಲ್ಲಿ ಮೂವರು ಮಹಿಳೆಯರು ಸೇರಿದಂತೆ 9 ಮಂದಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗಳಾದವರು ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿರುವುದಾಗಿ ತಿಳಿದುಬಂದಿದೆ.

Similar News