×
Ad

ವಂಚನೆ ಪ್ರಕರಣ: ಕೆಪಿಸಿಸಿ ಅಧ್ಯಕ್ಷ ಸುಧಾಕರನ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಕೇರಳ ಹೈಕೋರ್ಟ್

ಜೂನ್ 23 ರಂದು ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಆದೇಶ

Update: 2023-06-22 12:00 IST

ಕೊಚ್ಚಿ:  ವ್ಯಾಪಾರಿ ಮಾನ್ಸನ್ ಮಾವುಂಕಲ್‌ಗೆ ಎಸಗಿರುವ ವಂಚನೆ ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಬುಧವಾರ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಕೆ. ಸುಧಾಕರನ್‌ಗೆ ಎರಡು ವಾರಗಳ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಅಪರಾಧ ವಿಭಾಗದ ಮುಂದೆ ಹಾಜರಾಗುವಂತೆ ಸುಧಾಕರನ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ಮೇರೆಗೆ ಈ ಆದೇಶ ಹೊರಬಂದಿದೆ.

ಕ್ರಿಮಿನಲ್ ಪ್ರೊಸೀಜರ್ ಕೋಡ್ (Cr.P.C) ಯ 41A ಅಡಿಯಲ್ಲಿ ಪೊಲೀಸರು ನೀಡಿರುವ  ನೋಟಿಸ್‌ಗೆ ಅನುಗುಣವಾಗಿ ಜೂನ್ 23 ರಂದು ತನಿಖಾ ಅಧಿಕಾರಿಗಳ ಮುಂದೆ ಹಾಜರಾಗುವಂತೆ ನ್ಯಾಯಮೂರ್ತಿ ಝಿಯಾದ್ ರೆಹಮಾನ್ ಎ.ಎ. ಆದೇಶಿಸಿದರು.

ಒಂದು ವೇಳೆ ಸುಧಾಕರನ್ ರನ್ನು ಬಂಧಿಸಿದರೆ 50,000 ರೂ.ಗಳ ಬಾಂಡ್ ಅನ್ನು  ಒದಗಿಸಿ ಅಂತಹ ಮೊತ್ತದ ಎರಡು ಶ್ಯೂರಿಟಿಗಳೊಂದಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ ಎಂದು ನ್ಯಾಯಮೂರ್ತಿ ಝಿಯಾದ್ ರೆಹಮಾನ್ ಹೇಳಿದ್ದಾರೆ.

ತನಿಖೆಗೆ ಸಹಕರಿಸುವಂತೆ ಹಾಗೂ  ಸಾಕ್ಷಿಗಳನ್ನು ಬೆದರಿಸುವ ಅಥವಾ ಪ್ರಭಾವ ಬೀರುವ ಯಾವುದೇ ಪ್ರಯತ್ನಗಳನ್ನು ಮಾಡದಂತೆ ಕೇರಳ ಕಾಂಗ್ರೆಸ್ ಅಧ್ಯಕ್ಷರಿಗೆ ನ್ಯಾಯಾಲಯ ಸೂಚಿಸಿದೆ. ಪ್ರಕರಣದಲ್ಲಿ ಸುಧಾಕರನ್ ಅವರನ್ನು ಎರಡನೇ ಆರೋಪಿಯನ್ನಾಗಿ ಪಟ್ಟಿ ಮಾಡಲಾಗಿದೆ.

ಪೊಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ಹೇಳಿಕೆಯಲ್ಲಿ ತಮ್ಮ ವಿರುದ್ಧ ಯಾವುದೇ ಆರೋಪವಿಲ್ಲ ಎಂದು ಸುಧಾಕರನ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ವಾಸ್ತವವಾಗಿ ಪ್ರಕರಣವನ್ನು ದಾಖಲಿಸಿಕೊಂಡು 19 ತಿಂಗಳ ನಂತರ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯ ಆಧಾರದ ಮೇಲೆ ಅಪರಾಧ ವಿಭಾಗದ ಮುಂದೆ ಹಾಜರಾಗುವಂತೆ ನನಗೆ  ತಿಳಿಸಲಾಗಿತ್ತು. 2018ರಲ್ಲಿ ದೂರು ದಾಖಲಾಗಿದ್ದು, 2021ರಲ್ಲಿ ಪ್ರಕರಣ ದಾಖಲಾಗಿದೆ. ತನ್ನ  ವಿರುದ್ಧ ಹೊರಿಸಲಾದ ಆರೋಪಗಳ ಅಂಶಗಳನ್ನು ದೂರಿನಲ್ಲಿ ತಿಳಿಸಲಾಗಿಲ್ಲ ಎಂದು ಸುಧಾಕರನ್‌ ಹೇಳಿದರು.

Similar News