×
Ad

ಇರಾಕ್‌ನ ಬಲದ್ ವಾಯುನೆಲೆಯ ಮೇಲೆ ದಾಳಿ: ವರದಿ

Update: 2025-06-24 07:14 IST

ಬಾಗ್ದಾದ್‌: ಇರಾಕ್ ನ ಬಾಗ್ದಾದ್‌ ನಲ್ಲಿರುವ  ಬಲದ್ ವಾಯುಸೇನಾ ನೆಲೆಯ ಮೇಲೆ ದಾಳಿ ನಡೆದಿದೆ ಎಂದು ಬಾಗ್ದಾದ್‌ನಲ್ಲಿರುವ ಕುರ್ದಿಸ್ತಾನ್24 ಸುದ್ದಿ ವಾಹಿನಿಯನ್ನು ಉಲ್ಲೇಖಿಸಿ Aljazeera ವರದಿ ಮಾಡಿದೆ.

ಇರಾಕ್‌ನ ಸಲಾಹುದ್ದೀನ್ ಪ್ರಾಂತ್ಯದಲ್ಲಿ ಇರಾಕ್ ರಾಜಧಾನಿ ಬಾಗ್ದಾದ್ ನಿಂದ ಉತ್ತರಕ್ಕೆ 100 ಕಿಮೀ ದೂರದಲ್ಲಿ ಬಲದ್ ಮಿಲಿಟರಿ ವಾಯುಸೇನಾ ನೆಲೆಯಿದೆ. ಇರಾಕ್ ಯುದ್ಧದ ಸಮಯದಲ್ಲಿ ಅಮೆರಿಕವು ಈ ವಾಯು ಸೇನಾ ನೆಲೆಯನ್ನು ಬಳಸಿತ್ತು.

ಬಲದ್ ವಾಯು ಸೇನಾ ನೆಲೆಯ ಮೇಲಿನ ದಾಳಿಯಿಂದ ಸಾವುನೋವುಗಳು ಅಥವಾ ಹಾನಿಗಳ ಬಗ್ಗೆ ತಕ್ಷಣದ ಯಾವುದೇ ಮಾಹಿತಿ ಬಂದಿಲ್ಲ.

ಇರಾಕ್‌ನಲ್ಲಿರುವ ಅಮೆರಿಕದ ಎರಡನೇ ಅತಿದೊಡ್ಡ ವಾಯು ನೆಲೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಲದ್ ವಾಯುನೆಲೆ ಎರಡು ಸ್ಫೋಟಗಳು ಕೇಳಿಬಂದಿವೆ ಎಂದು ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆ ಈ ಹಿಂದೆ ವರದಿ ಮಾಡಿತ್ತು.

ಅಲ್ಲದೆ, ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂದಿನ ಅಮೆರಿಕಾದ ವಿಕ್ಟರಿ ಬೇಸ್ ಕಾಂಪ್ಲೆಕ್ಸ್ ಡ್ರೋನ್ ದಾಳಿಗೆ ತುತ್ತಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News