×
Ad

ಅಕ್ಟೋಬರ್‌ನಲ್ಲಿ ರಶ್ಯದ ತೈಲ ಆಮದಿನಲ್ಲಿ ಶೇ.38ರಷ್ಟು ದಾಖಲೆಯ ಕುಸಿತ

Update: 2025-12-04 22:18 IST

ಸಾಂದರ್ಭಿಕ ಚಿತ್ರ


ಹೊಸದಿಲ್ಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತವು ಈ ವರ್ಷದ ಆಕ್ಟೋಬರ್ ತಿಂಗಳಲ್ಲಿ ರಶ್ಯದಿಂದ ಆಮದು ಮಾಡಿಕೊಂಡ ತೈಲದ ಮೌಲ್ಯದಲ್ಲಿ ಶೇ.38ರಷ್ಟು ಹಾಗೂ ಪ್ರಮಾಣದಲ್ಲಿ ಶೇ.31ರಷ್ಟು ಕಡಿತಗೊಳಿಸಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯದ ಅಧಿಕೃತ ದತ್ತಾಂಶ ತಿಳಿಸಿದೆ.

ಈ ವರ್ಷದ ಆಕ್ಟೋಬರ್‌ನಲ್ಲಿ ಭಾರತವು ರಶ್ಯದ 3.55 ಶತಕೋಟಿ ಡಾಲರ್ ಮೌಲ್ಯದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿತ್ತು. 2024ರ ಆಕ್ಟೋಬರ್‌ನಲ್ಲಿ ಐತಿಹಾಸಿಕವಾಗಿ ಗರಿಷ್ಠ ಅಂದರೆ 5.8 ಶತಕೋಟಿ ಡಾಲರ್ ಮೌಲ್ಯದ ಕಚ್ಚಾತೈಲ ಆಮದು ಮಾಕೊಳ್ಳಲಾಗಿದ್ದು, ಅದಕ್ಕೆ ಹೋಲಿಸಿದರೆ ಈ ಸಲ ರಶ್ಯದಿಂದ ತೈಲ ಖರೀದಿಯಲ್ಲಿ ಗಣನೀಯ ಇಳಿಕೆಯಾಗಿದೆ.

ಭಾರತವು ರಶ್ಯದಿಂದ ಅಕ್ಟೋಬರ್ 71.6 ಲಕ್ಷ ಟನ್ ಪ್ರಮಾಣದ ತೈಲ ಆಮದು ಮಾಡಿಕೊಂಡಿದೆ. 2024ರ ಆಕ್ಟೋಬರ್‌ನಲ್ಲಿ 103.8 ಲಕ್ಷ ಟನ್ ಗರಿಷ್ಠ ಪ್ರಮಾಣದ ತೈಲವನ್ನು ಭಾರತವು ರಶ್ಯದಿಂದ ಖರೀದಿಸಿತ್ತು. ಈ ವರ್ಷ ಇದೇ ಅವಧಿಯಲ್ಲಿ ರಶ್ಯನ್ ತೈಲದ ಆಮದಿನಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

2025ರ ಸೆಪ್ಟೆಂಬರ್‌ನಲ್ಲಿ ರಶ್ಯನ್ ತೈಲದ ಆಮದು ಮೌಲ್ಯದಲ್ಲಿ ಶೇ. 29ರಷ್ಟು ಇಳಿಕೆಯಾಗಿದ್ದರೆ, ಪ್ರಮಾಣದಲ್ಲಿ ಶೇ.17ರಷ್ಟು ಕುಸಿತವಾಗಿದೆ. ಆದಾಗ್ಯೂ ಭಾರತದ ಒಟ್ಟು ತೈಲ ಆಮದಿನಲ್ಲಿ ಮೌಲ್ಯ ಹಾಗೂ ಪ್ರಮಾಣಗಳೆರಡರಲ್ಲೂ ಈಗಲೂ ರಶ್ಯವು ಶೇ.32ರಷ್ಟು ಪಾಲನ್ನು ಹೊಂದಿದೆ.

ಅಕ್ಟೋಬರ್ 2025ರಲ್ಲಿ ಭಾರತದ ಒಟ್ಟು ತೈಲ ಆಮದು ಶುಲ್ಕದಲ್ಲಿ ಶೇ.15.4 ಶೇಕಡ ಇಳಿಕೆಯಾಗಿರುವುದು ಗಮನಾರ್ಹವಾಗಿದೆ. ಇದೇ ವೇಳೆ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಆಕ್ಟೋಬರ್‌ನಲ್ಲಿ ಅಮೆರಿಕದಿಂದ ಭಾರತದ ತೈಲ ಆಮದಿನ ಪ್ರಮಾಣದಲ್ಲಿ ಶೇ.40ರಷ್ಟು ಹಾಗೂ ಮೌಲ್ಯದಲ್ಲಿ 18.3 ಶೇ. ಹೆಚ್ಚಳವಾಗಿದೆ.

ರಶ್ಯದಿಂದ ಭಾರತವು ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕಾಗಿ ಅಮೆರಿಕದ ಟ್ರಂಪ್ ಆಡಳಿತವು ಆಗಸ್ಟ್‌ನಲ್ಲಿ ಭಾರತೀಯ ಉತ್ಪನ್ನಗಳಿಗೆ ಶೇ.25ರಷ್ಟು ಹೇರಿರುವ ಹಿನ್ನೆಲೆಯಲ್ಲಿ ರಶ್ಯನ್ ತೈಲ ಖರೀದಿಯನ್ನು ಕಡಿಮೆಗೊಳಿಸುವ ಕಾರ್ಯತಂತ್ರವನ್ನು ಭಾರತವು ಅನುಸರಿಸುತ್ತಿದೆಯೆಂದು ‘ದಿ ಹಿಂದೂ ದೈನಿಕ’ದ ವರದಿಯೊಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News