ಬಾಂಗ್ಲಾದೇಶ| ಢಾಕಾದಲ್ಲಿ 4.1 ತೀವ್ರತೆಯ ಭೂಕಂಪನ
Update: 2025-12-04 10:55 IST
ಸಾಂದರ್ಭಿಕ ಚಿತ್ರ (PTI)
ಢಾಕಾ: ಗುರುವಾರ ಮುಂಜಾನೆ ಬಾಂಗ್ಲಾದೇಶದಲ್ಲಿ 4.1 ತೀವ್ರತೆಯ ಭೂಕಂಪನ ಸಂಭವಿಸಿದೆ. ರಾಜಧಾನಿ ಢಾಕಾ ಮತ್ತು ನೆರೆಯ ಜಿಲ್ಲೆಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿದೆ.
ಸ್ಥಳೀಯ ಕಾಲಮಾನ ಗುರುವಾರ ಬೆಳಿಗ್ಗೆ 6.14ಕ್ಕೆ ಭೂಕಂಪನ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ನರಸಿಂಗ್ಡಿಯಲ್ಲಿ 30ಕಿ.ಮೀ ಆಳದಲ್ಲಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಶಾಸ್ತ್ರ ಕೇಂದ್ರವು ತಿಳಿಸಿದೆ.
ಭೂಕಂಪನದಿಂದ ಯಾವುದೇ ಹಾನಿ ಅಥವಾ ಸಾವುನೋವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಢಾಕಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ನಿವಾಸಿಗಳು ಲಘು ಕಂಪನವನ್ನು ಅನುಭವಿಸಿದ್ದಾರೆ ಎಂದು ವರದಿಯಾಗಿದೆ.