×
Ad

ಬಾಗಲಕೋಟೆ: ಆರೆಸ್ಸೆಸ್ ಶತಮಾನೋತ್ಸವದ ಅಂಗವಾಗಿ ಹಿಂದೂ ಸಮ್ಮೇಳನ, ಶೋಭಾಯಾತ್ರೆ

Update: 2026-03-02 11:59 IST

 ಬಾಗಲಕೋಟೆ : ಆರೆಸ್ಸೆಸ್ ನ ನೂರು ವರ್ಷಾಚರಣೆ ಹಿನ್ನಲೆಯಲ್ಲಿ ಆಯೋಜಿಸಿದ ಹಿಂದೂ ಸಮ್ಮೇಳನ ಅಂಗವಾಗಿ ಬಾಗಲಕೋಟೆ ನಗರದಲ್ಲಿ ಶೋಭಾಯಾತ್ರೆ ನಡೆಯಿತು.

ನಗರದ ವೆಂಕಟಪೇಟೆಯಿಂದ ಪ್ರಾರಂಭವಾದ ಮೆರವಣಿಗೆ ಕಿಲ್ಲಾದ ಅಂಬಾಭವಾನಿ ದೇವಾಲಯದಿಂದ, ಪಂಕಾ ಮಸೀದಿ ಮುಂದೆ ಸಾಗಿ, ವಲ್ಲಭಭಾಯಿ ವೃತ್ತದ ಮೂಲಕ ಬಸವೇಶ್ವರ ಸರ್ಕಲ್ನಿಂದ ಬಿವಿವಿ ಸಂಘದ ಮೈದಾನದಲ್ಲಿ ಅಂತ್ಯಗೊಂಡಿತು.

ಮಾಜಿ ಶಾಸಕ ವೀರಣ್ಣ ಚರಂತಿಮಠ, ಲೋಕಸಭಾ ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡೆಗೆ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು, ಮಹಿಳೆಯರು ಹಾಗೂ ಯುವಕ-ಯುವತಿಯರು ಭಾಗವಹಿಸಿದ್ದರು.

ಮಸೀದಿಯ ಮುಂದೆ ಮೆರವಣಿಗೆ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಇಡೀ ಮಸೀದಿಯನ್ನು ಬಟ್ಟೆಯಿಂದ ಮುಚ್ಚಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಫೆಬ್ರವರಿ 19ರಂದು ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಉಂಟಾದ ಗಲಭೆಯ ಹಿನ್ನೆಲೆ, ಮಸೀದಿ ಮುಂದೆ ಮೆರವಣಿಗೆ ಸಾಗುವ ವೇಳೆ ಇಡೀ ಮಸೀದಿಗೆ ಬಟ್ಟೆ ಕಟ್ಟಿ ಭದ್ರತೆ ನೀಡಲಾಗಿತ್ತು. ಪೊಲೀಸರು ಸಹ ಬಿಗಿ ಭದ್ರತೆ ಏರ್ಪಡಿಸಿದ್ದರು.

ಶೋಭಾಯಾತ್ರೆಯ ಬಳಿಕ ಬಸವೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News