Bagalkote | ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಕಲ್ಲು ತೂರಾಟ ಆರೋಪ; ಆರೋಪಿಗಳಾದ ಅಶೋಕ ಬಾರಕೇರ, ಸಿದ್ಧಪ್ಪ ಘೇರಡೆ ಬಂಧನ
Update: 2026-02-22 14:55 IST
ಸಾಂದರ್ಭಿಕ ಚಿತ್ರ | PC : gemini AI
ಬಾಗಲಕೋಟೆ : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ನಗರದ ಮಾರುಕಟ್ಟೆಯ ಹತ್ತಿರ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಇಬ್ಬರ ವಿರುದ್ಧ ಬಾಗಲಕೋಟೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆಯ ಅಶೋಕ ಬಾರಕೇರ ಹಾಗೂ ಸಿದ್ಧಪ್ಪ ಘೇರಡೆ ಎಂಬುವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ʼಆರೋಪಿ ಅಶೋಕ ಕಲ್ಲು ತೂರಿ ಓಡಿ ಹೋಗುವಾಗ ಬಿದ್ದು ಗಾಯಮಾಡಿಕೊಂಡಿದ್ದು, ನಮ್ಮ ಸಿಬ್ಬಂದಿ ಅವರಿಗೆ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆʼ ಎಂದು ಎಸ್.ಪಿ ಸಿದ್ದಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ