×
Ad

Bagalkote | ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಆರೋಪ; ಸ್ಥಳದಲ್ಲಿ‌ ಬಿಗುವಿನ ವಾತಾವರಣ

Update: 2026-02-20 00:42 IST

ಬಾಗಲಕೋಟೆ : ಶಿವಾಜಿ ಜಯಂತಿ ಹಿನ್ನೆಲೆ ನಡೆಯುತ್ತಿದ್ದ ಮೆರವಣಿಗೆ ಸಮಯದಲ್ಲಿ ದುಷ್ಕರ್ಮಿಗಳು ಕಲ್ಲು ತೋರಾಟ ನಡೆಸಿರುವ ಆರೋಪ ಕೇಳಿ ಬಂದಿದ್ದು, ಬಾಗಲಕೋಟೆ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

ಮರಾಠ ಸಮುದಾಯದ ವತಿಯಿಂದ ಸಂಜೆ ಸಮಯದಲ್ಲಿ ಶಿವಾಜಿ ಮಹಾರಾಜರ ಜಯಂತಿ‌ ಹಿನ್ನೆಲೆ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಕಿಲ್ಲಾದ ಅಂಬಾಭವಾನಿ ದೇವಾಲಯದಿಂದ ಪ್ರಾರಂಭವಾದ ಶಿವಾಜಿ ಮಹಾರಾಜರ ಮೆರವಣಿಗೆ ಪ್ರಮುಖ ರಸ್ತೆಯ ಮೂಲಕ‌ ಬಸವೇಶ್ವರ ವೃತ್ತದಲ್ಲಿ ಹೋಗಿ ಬಳಿಕ ವಲ್ಲಭಭಾಯಿ ಚೌಕ‌ ಮೂಲಕ‌ ಕಿಲ್ಲಾದಲ್ಲಿ‌ ಮುಕ್ತಾಯ ಆಗುತ್ತಿತ್ತು. ಮೆರವಣಿಗೆ ಸಾಗುತ್ತಿದ್ದ ಸಮಯದಲ್ಲಿ ಕೆಲ ದುಷ್ಕರ್ಮಿಗಳು ಕಲ್ಲು‌ ತೋರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಿಂದುತ್ವ ಸಂಘಟನೆ ಮುಖಂಡರು‌, ಮೆರವಣಿಗೆ ಮೇಲೆ‌ ಕಲ್ಲು‌‌‌ ಎಸೆಗಿರುವ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸ್ಥಳದಲ್ಲಿ‌ ಬಿಗುವಿನ ವಾತಾವರಣ ನಿರ್ಮಾಣ ಆಗಿದ್ದು, ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News