×
Ad

ಬೆಂಗಳೂರು | ತಂದೆಯ ಕೊಲೆ ಪ್ರತೀಕಾರಕ್ಕೆ ಮಾವನ ಹತ್ಯೆ: ಆರೋಪಿ ಬಂಧನ

Update: 2025-05-05 21:15 IST

ಸಾಂದರ್ಭಿಕ ಚಿತ್ರ | PC : freepik.com

ಬೆಂಗಳೂರು : ತಂದೆಯ ಕೊಲೆ ಪ್ರತೀಕಾರಕ್ಕಾಗಿ ಮಗನೊಬ್ಬ ತನ್ನ ಮಾವನನ್ನು ಹತ್ಯೆಗೈದಿರುವ ಘಟನೆ ಇಲ್ಲಿನ ರಾಮಮೂರ್ತಿನಗರ ಠಾಣಾ ವ್ಯಾಪ್ತಿಯ ಟಿನ್ ಫ್ಯಾಕ್ಟರಿ ಬಳಿ ವರದಿಯಾಗಿದೆ.

ಸಿರಾಜ್(32) ಕೊಲೆಯಾದ ವ್ಯಕ್ತಿಯಾಗಿದ್ದು, ಫಹಾದ್ ಕೊಲೆ ಮಾಡಿದ ಆರೋಪಿ ಎಂದು ತಿಳಿದುಬಂದಿದೆ. ಆರೋಪಿ ಫಹಾದ್ ಚಿಕ್ಕವನಿದ್ದಾಗ ಆತನ ಕಣ್ಣೆದುರೇ ತಂದೆ ಅನ್ಸರ್ ಪಾಷಾನನ್ನು ಸಿರಾಜ್ ಕೊಲೆಗೈದಿದ್ದಾನೆ. ತನ್ನ ತಂದೆಯ ಸಾವಿಗೆ ಪ್ರತೀಕಾರಕ್ಕಾಗಿ 16 ವರ್ಷಗಳ ಬಳಿಕ ತನ್ನ ಮಾವ ಸಿರಾಜ್‍ನನ್ನು ಫಹಾದ್ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಅನ್ಸರ್ ಪಾಷಾ ಕೊಲೆ ಪ್ರಕರಣದಲ್ಲಿ ಸಿರಾಜ್ 10 ವರ್ಷಗಳ ಕಾಲ ಜೈಲಿನಲ್ಲಿದ್ದನು. ಸಿರಾಜ್ ಜೈಲಿನಿಂದ ಹೊರಗೆ ಬಂದ ಮೇಲೆ ತನ್ನ ಪ್ರತೀಕಾರವನ್ನು ಫಹಾದ್ ತೀರಿಸಿಕೊಂಡಿದ್ದಾನೆ. ಕೊಲೆಯಾದ ಸಿರಾಜ್, ಅನ್ಸರ್ ಪಾಷಾನ ಸಹೋದರಿಯ ಪುತ್ರನಾಗಿದ್ದನು. ಸದ್ಯ ಆರೋಪಿ ಫಹಾದ್‍ನನ್ನು ಬಂಧಿಸಲಾಗಿದ್ದು, ಕ್ರಮ ಜರುಗಿಸಲಾಗಿದೆ ಎಂದು ರಾಮಮೂರ್ತಿನಗರ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News