×
Ad

ಬೆಂಗಳೂರು | ಕುಕ್ಕರ್ ಸ್ಫೋಟ : ಓರ್ವ ಮೃತ್ಯು, ಮತ್ತೊಬ್ಬನಿಗೆ ಗಾಯ

Update: 2024-08-14 21:10 IST

ಸಾಂದರ್ಭಿಕ ಚಿತ್ರ . Photo: NDTV 

ಬೆಂಗಳೂರು : ಅಡುಗೆ ಮಾಡಲು ಕುಕ್ಕರ್ ಇಟ್ಟಾಗ ಸ್ಫೋಟಗೊಂಡು ರೂಮಿನಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಯುವಕರ ಪೈಕಿ ಓರ್ವ ಮೃತಪಟ್ಟಿರುವ ಘಟನೆ ಇಲ್ಲಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜೆ.ಪಿ.ನಗರದಲ್ಲಿ ಬುಧವಾರ ನಡೆದಿದೆ.

ಈ ಅವಘಡದಲ್ಲಿ ಉತ್ತರ ಪ್ರದೇಶ ಮೂಲದ ಮೋಸಿನ್ ಮೃತಪಟ್ಟಿದ್ದು, ಆಜಂ ಖಾನ್ ಎಂಬ ಯುವಕನಿಗೆ ಗಾಯಗಳಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪುಟ್ಟೇನಹಳ್ಳಿ ಠಾಣಾ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.

ರೂಮ್‍ನಲ್ಲಿ ಅಡುಗೆ ಮಾಡಲು ಗ್ಯಾಸ್ ಸ್ಟೌವ್ ಮೇಲೆ ಕುಕ್ಕರ್ ಇಟ್ಟು ಇಬ್ಬರು ಯುವಕರು ನಿದ್ರಿಸಿದ್ದು, ಈ ವೇಳೆ ಕುಕ್ಕರ್ ತಾಪ ಹೆಚ್ಚಾಗಿ ಸ್ಫೋಟಗೊಂಡಿದೆ. ಕುಕ್ಕರ್ ಸ್ಫೋಟವಾಗಿ ಬಲ್ಬ್‌ ಗೆ ತಾಗಿ ಶಾರ್ಟ್ ಸಕ್ರ್ಯೂಟ್‍ನಿಂದ ರೂಮ್‍ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಡುಗೆ ಕುಕ್ಕರ್ ಸಿಡಿದಿರುವುದು ಬಿಟ್ಟರೆ ಬೇರೆ ಯಾವುದೇ ಸ್ಪೋಟಕ ಕಂಡುಬಂದಿಲ್ಲ. ಉಗ್ರ ಕೃತ್ಯದ ರೀತಿಯಲ್ಲಿ ಯಾವ ಸಾಕ್ಷಿಗಳು ಪತ್ತೆಯಾಗಿಲ್ಲ. ಈಗಾಗಲೇ ನುರಿತ ತಜ್ಞರಿಂದ ಪರಿಶೀಲನೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News