×
Ad

ಕೆ.ಎಸ್.ಈಶ್ವರಪ್ಪ ಅವರು ಬಿಜೆಪಿಗೆ ಸೇರುವ ಕಥೆ ಮುಗಿದಿದೆ : ಬೇಳೂರು ಗೋಪಾಲಕೃಷ್ಣ ವ್ಯಂಗ್ಯ

Update: 2026-07-09 22:35 IST

ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಯಾವಾಗ 17 ಜನ ಶಾಸಕರನ್ನು ಬಿಜೆಪಿ ಖರೀದಿ ಮಾಡಿತ್ತು ಎಂಬ ಹೇಳಿಕೆ ನೀಡಿದರೋ, ಅವತ್ತೇ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳುವ ಕಥೆ ಮುಗಿಯಿತು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎಸ್. ಈಶ್ವರಪ್ಪನವರು ಇತ್ತೀಚೆಗೆ ಬಹಳಷ್ಟು ಚಿಗುರಿಕೊಂಡಿದ್ದಾರೆ. ಎಸ್‌ಐಆರ್ ವಿಚಾರವಾಗಿ ಹಿಂದೂ-ಮುಸ್ಲಿಂ ಎಂಬ ಧೋರಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಸರ ಉಳಿವಿಗಾಗಿ ಅವರು ಹೋರಾಟ ನಡೆಸುವುದಕ್ಕೆ ನಮ್ಮದೇನು ತಕರಾರಿಲ್ಲ. ಆದರೆ, ಕೇಂದ್ರ ಸರಕಾರ ರಸ್ತೆ ನಿರ್ಮಾಣ ಮಾಡುವಾಗ ಸಾವಿರಾರು ಮರಗಳನ್ನು ಕಡೆದಾಗ ಇವರು ಏಕೆ ಬಾಯಿ ಮುಚ್ಚಿಕೊಂಡು ಇರುತ್ತಾರೆ? ಎಂದು ಪ್ರಶ್ನಿಸಿದರು.

ಬಿಜೆಪಿಗೆ ಈಶ್ವರಪ್ಪ ಅವರು ಮತ್ತೆ ಮರಳಲು ಸಾಧ್ಯವೇ ಇಲ್ಲ, ಒಂದು ವೇಳೆ ಹೋದರೂ ಅವರಿಗೆ ಇನ್ನು ಮುಂದೆ ಟಿಕೆಟ್ ಸಿಗುವುದಿಲ್ಲ. 17 ಶಾಸಕರ ಆಪರೇಷನ್ ಕಮಲದ ಸತ್ಯವನ್ನು ಸ್ವತಃ ಬಿಚ್ಚಿಟ್ಟ ಮೇಲಂತೂ ಅವರ ರಾಜಕೀಯ ಕಥೆ ಮುಗಿದ ಅಧ್ಯಾಯ ಎಂದು ವ್ಯಂಗ್ಯವಾಡಿದರು.

ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ನಾನು ಕೂಡ ಸಚಿವ ಆಕಾಂಕ್ಷಿ ಆಗಿದ್ದೇನೆ. ಸಹಜವಾಗಿಯೇ ಎಲ್ಲರಂತೆ ನಾನು ಕೂಡ ದೆಹಲಿಗೆ ಹೋಗಿದ್ದೇನೆ. ಇದರಲ್ಲಿ ಲಾಭಿಯ ಪ್ರಶ್ನೆ ಇಲ್ಲ. ಎಲ್ಲರಿಗೂ ಸಹಜವಾಗಿ ಹಂಬಲ ಇದ್ದೇ ಇರುತ್ತದೆ. ಕಾದು ನೊಡೋಣ. ಸಚಿವ ಸ್ಥಾನ ಸಿಗಬಹುದು ಎಂಬ ನೀರೀಕ್ಷೆಯಲ್ಲಿದ್ದೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News