Bengaluru | 1,119 ಮೊಬೈಲ್‍ಗಳನ್ನು ವಾರಸುದಾರರಿಗೆ ಹಿಂತಿರುಗಿಸಿದ ಪೊಲೀಸರು
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಸೆಂಟ್ರಲ್ ಇಕ್ವಿಪ್‍ಮೆಂಟ್ ಐಡೆಂಟಿಟಿ ರಿಜಿಸ್ಟರ್(ಸಿಇಐಆರ್) ಪೋರ್ಟಲ್‍ನಲ್ಲಿ ದಾಖಲಾಗಿದ್ದ ಮೊಬೈಲ್ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿದ ವೈಟ್‍ಫೀಲ್ಡ್ ಠಾಣೆ ಪೊಲೀಸರು, ಒಟ್ಟು 2.70 ಕೋಟಿ ರೂ.ಮೌಲ್ಯದ 1,119 ಮೊಬೈಲ್‍ಫೋನ್‍ಗಳನ್ನು ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.
ಕೆ.ಆರ್.ಪುರಂ ಠಾಣೆ ಪೊಲೀಸರು 50 ಲಕ್ಷ ಮೌಲ್ಯದ 187 ಮೊಬೈಲ್, ಮಾರತಹಳ್ಳಿ ಠಾಣೆ 45 ಲಕ್ಷ ಮೌಲ್ಯದ 145 ಮೊಬೈಲ್, ವೈಟ್‍ಫೀಲ್ಡ್ ಠಾಣೆ 30 ಲಕ್ಷ ಮೌಲ್ಯದ 140 ಮೊಬೈಲ್, ಮಹದೇವಪುರ ಠಾಣೆ 25 ಲಕ್ಷ ಮೌಲ್ಯದ 132 ಮೊಬೈಲ್, ವರ್ತೂರು ಠಾಣೆ 30 ಲಕ್ಷ ಮೌಲ್ಯದ 120 ಮೊಬೈಲ್, ಕಾಡುಗೋಡಿ ಠಾಣೆ 20 ಲಕ್ಷ ಮೌಲ್ಯದ 110 ಮೊಬೈಲ್, ಎಚ್‍ಎಎಲ್ ಠಾಣೆ ಪೊಲೀಸರು 25 ಲಕ್ಷ ಮೌಲ್ಯದ 110 ಮೊಬೈಲ್‍ಗಳನ್ನು ಸಾರ್ವಜನಿಕರಿಗೆ ಹಿಂತಿರುಗಿಸಿದ್ದಾರೆ.
ಬೆಳ್ಳಂದೂರು ಠಾಣೆ ಪೊಲೀಸರು 31 ಲಕ್ಷ ಮೌಲ್ಯದ 103 ಮೊಬೈಲ್, ಅವಲಹಳ್ಳಿ ಠಾಣೆ 14 ಲಕ್ಷ ಮೌಲ್ಯದ 70 ಮೊಬೈಲ್, ಸೆನ್ ಪೊಲೀಸ್ ಠಾಣೆ 42 ಸಾವಿರ ರೂಪಾಯಿ ಮೌಲ್ಯದ 2 ಮೊಬೈಲ್ ಫೋನ್‍ಗಳು ಹೀಗೆ ವೈಟ್‍ಫೀಲ್ಡ್ ವಿಭಾಗದ ವ್ಯಾಪ್ತಿಗೆ ಬರುವ ಒಟ್ಟು 10ಪೊಲೀಸ್ ಠಾಣೆಯಿಂದ 2.70 ಕೋಟಿ ರೂ. ಮೌಲ್ಯದ 1,119 ಮೊಬೈಲ್ ಫೋನ್‍ಗಳನ್ನು ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.