Bengaluru | ಡಿಜಿಟಲ್ ಅರೆಸ್ಟ್ ದಂಧೆಗೆ ಸಹಕರಿಸಿದ ಕೇರಳಂ ಮೂಲದ ಆರೋಪಿಯ ಬಂಧನ

Update: 2026-07-25 22:21 IST

ಸಾಂದರ್ಭಿಕ ಚಿತ್ರ | PC : AI

ಬೆಂಗಳೂರು : ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಿಜಿಟಲ್ ಅರೆಸ್ಟ್ ದಂಧೆ ನಡೆಸುತ್ತಿದ್ದ ವಂಚಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರೋಪದಡಿ ಕೇರಳಂನ ಮೂಲದ ಗುತ್ತಿಗೆದಾರನೊಬ್ಬನನ್ನು ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಅಜಯನ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

ಪ್ರಕರಣವೊಂದರ ತನಿಖೆ ಕೈಗೆತ್ತಿಕೊಂಡ ಸೈಬರ್ ಕ್ರೈಮ್ ಪೊಲೀಸರು ಹಣದ ಹರಿವನ್ನು ಬೆನ್ನತ್ತಿದಾಗ, ಅಜಯನ್ ಖಾತೆಗೆ ಕೋಟ್ಯಂತರ ರೂಪಾಯಿ ಜಮೆಯಾಗಿ, ಆ ಖಾತೆಯಿಂದ ಬೇರೆಡೆಗೆ ವರ್ಗಾವಣೆಯಾಗಿರುವುದನ್ನು ಪತ್ತೆಹಚ್ಚಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಅಜಯನ್‍ನನ್ನು ಬಂಧಿಸಿದ್ದಾರೆ.

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಣ ದೋಚುತ್ತಿದ್ದ ದುಬೈನ ಸೈಬರ್ ವಂಚಕರಿಗೆ ಆರೋಪಿ ಅಜಯನ್ ನಕಲಿ ಬ್ಯಾಂಕ್ ಖಾತೆಗಳ ವಿವರಗಳನ್ನು ಪೂರೈಸುತ್ತಿದ್ದನು. ಇದಕ್ಕೆ ಪ್ರತಿಯಾಗಿ ಆರೋಪಿಗಳಿಂದ ಕಮಿಷನ್ ಹಣ ಪಡೆಯುತ್ತಿದ್ದ. ಸಾರ್ವಜನಿಕರನ್ನು ಬೆದರಿಸಿ ದೋಚುವ ಹಣವನ್ನು ಮೊದಲು ಈ ರೀತಿಯ ನಕಲಿ ಖಾತೆಗಳಿಗೆ ಜಮೆ ಮಾಡಿಸುತ್ತಿದ್ದ ವಂಚಕರು, ಬಳಿಕ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News