×
Ad

ನಾಳೆ ಕಾಮೆಡ್-ಕೆ ಪರೀಕ್ಷೆ | 1.30 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ

Update: 2025-05-09 23:30 IST

ಸಾಂದರ್ಭಿಕ ಚಿತ್ರ | PC : freepik.com

ಬೆಂಗಳೂರು : ರಾಜ್ಯದಲ್ಲಿರುವ ಖಾಸಗಿ ಕಾಲೇಜುಗಳ ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶಾತಿಗೆ ನಡೆಯುವ ಕಾಮೆಡ್-ಕೆ ಪರೀಕ್ಷೆಯು ನಾಳೆ(ಮೇ 10) ನಡೆಯಲಿದ್ದು, ಪರೀಕ್ಷೆಗೆ ದೇಶಾದ್ಯಂತ 1,31,937 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ.

ರಾಜ್ಯ ಸರಕಾರವು ನಡೆಸುವ ಸಿಇಟಿ ಮಾದರಿಯಲ್ಲಿ ಕರ್ನಾಟಕದ ವೈದ್ಯಕೀಯ ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟವು ಪ್ರತಿ ವರ್ಷ ಕಾಮೆಡ್-ಕೆ ಪರೀಕ್ಷೆಯನ್ನು ನಡೆಸುತ್ತಿದೆ. ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿದ್ದು, ದೇಶದ ವಿವಿಧ ನಗರಗಳಲ್ಲಿ ನಡೆಯಲಿದೆ.

ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡ ನಂತರ ರ್ಯಾಂಕ್ ಆಧಾರದಲ್ಲಿ ಕೋರ್ಸ್‍ಗಳಿಗೆ ಪ್ರವೇಶ ಕಲ್ಪಿಸಲಾಗುತ್ತದೆ. ಖಾಸಗಿ ಮಾಲೀಕತ್ವದಲ್ಲಿ ನಡೆಸಲಾಗುತ್ತಿರುವ ರಾಜ್ಯದ 212 ಎಂಜಿನಿಯರಿಂಗ್, 24 ಆರ್ಕಿಟೆಕ್ಚರ್, 17 ಮೆಡಿಕಲ್, 23 ಡೆಂಟಲ್ ಕಾಲೇಜುಗಳಿಗೆ ಪ್ರವೇಶ ನೀಡಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News