×
Ad

ಆರೆಸ್ಸೆಸ್‍ಗೆ ದಲಿತ ಸರಸಂಘ ಚಾಲಕರನ್ನು ನೇಮಿಸುವ ಧೈರ್ಯ ತೋರಲಿ : ಕಾಂಗ್ರೆಸ್

Update: 2025-04-15 21:56 IST

ಬೆಂಗಳೂರು : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಬಿಜೆಪಿ ನಾಯಕರಿಗೆ ನಿಜಕ್ಕೂ ಬಾಬಾಸಾಹೇಬರ ಬಗೆಗೆ ಗೌರವವಿದ್ದರೆ, ದಲಿತರು, ಹಿಂದುಳಿದವರ ಬಗ್ಗೆ ಕಾಳಜಿ ಇದ್ದರೆ ನಾಗಪುರದ ತಮ್ಮ ಮಾತೃ ಸಂಘಟನೆಗೆ ದಲಿತ ಸರಸಂಘ ಚಾಲಕರನ್ನು ನೇಮಿಸುವಂತೆ ಹೇಳುವ ಧೈರ್ಯ ತೋರಲಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ.

ಮಂಗಳವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ಬಿಜೆಪಿ-ಸಂಘಪರಿವಾರದ ಮನುವಾದಿ ಮನಸ್ಥಿತಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆ ಕನ್ನಡಿ ಹಿಡಿದಿದೆ ಎಂದು ವಾಗ್ದಾಳಿ ನಡೆಸಿದೆ.

ದಲಿತರು, ಬಹುಜನರನ್ನು ಎಂದೂ ಒಳಗೊಳ್ಳದ ಆರ್‌ಎಸ್‍ಎಸ್ ಸಿದ್ಧಾಂತ ಅವರನ್ನು ಹಿಂದೂ ಧರ್ಮದೊಳಗೆ ಕಲ್ಪಿಸಿಕೊಳ್ಳುವುದಿರಲಿ ಅವರು ಮುಖ್ಯವಾಹಿನಿಗೆ ಬರುವುದನ್ನೂ ಅರಗಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News