×
Ad

ರೇಣುಕಾಸ್ವಾಮಿ ಕೊಲೆ ಪ್ರಕರಣ | ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ : ನಟ ಡಾಲಿ ಧನಂಜಯ್

Update: 2024-07-11 20:25 IST

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿಗೆ ಹೋಗಿರುವುದು ನಮ್ಮ ಮನೆಯವರೇ ಹೋದಂತಹ ಭಾವನೆ ಬರುತ್ತಿದೆ. ಆದರೆ, ನಟ ದರ್ಶನ್ ತಪ್ಪು ಮಾಡಿದ್ದರೆ ಕಾನೂನಿನ ಅನ್ವಯ ಶಿಕ್ಷೆಯಾಗಲಿ ಎಂದು ಚಿತ್ರನಟ ಡಾಲಿ ಧನಂಜಯ್ ತಿಳಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಆರೋಪಿಗಳು ನಮ್ಮ ಮನೆಯವರೇ ಆದಾಗ ಏನು ಮಾತನಾಡುವುದು. ಅಲ್ಲಿ ಒಂದು ದುರಂತ ನಡೆದು ಒಬ್ಬರ ಜೀವ ಹೋಗಿದೆ. ಆ ಮನುಷ್ಯನ ತಂದೆ, ತಾಯಿ ಮುಖ ನೋಡಿದಾಗ ಬೇಜಾರಾಗುತ್ತದೆ ಎಂದರು.

ತಪ್ಪು ಮಾಡಿದ್ದಾರೆಂದರೆ ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಆದರೆ, ಈ ಕೊಲೆ ಆರೋಪದಲ್ಲಿ ನಟ ದರ್ಶನ್ ಅವರ ಹೆಸರು ಕೇಳಿಬಂದಿರುವುದು ಮನಸ್ಸಿಗೆ ತುಂಬಾ ಬೇಜಾರಾಗುತ್ತದೆ ಎಂದು ಡಾಲಿ ಧನಂಜಯ ಹೇಳಿದರು.

ಇನ್ನು ನಮ್ಮ ನಡುವೆ ಸಮಾಜದಲ್ಲಿ ಜೀವನ ಮಾಡುವ ಒಬ್ಬ ವ್ಯಕ್ತಿಯ ಜೀವ ಹೋದಾಗ ಕಾನೂನಾತ್ಮಕವಾಗಿ ಏನೇನು ಆಗಬೇಕೋ ಅದು ಆಗತ್ತದೆ. ಅಲ್ಲಿ ಏನೇನು ಆಗಿದಿಯೋ ಅದೆಲ್ಲಾ ಪೊಲೀಸರಿಗೆ ಗೊತ್ತಿರುತ್ತದೆ. ಆದರೆ, ಕೆಲವೊಂದು ಹೋರಾಟಗಳನ್ನು ಒಂಟಿಯಾಗಿ ಎದುರಿಸಬೇಕಾಗುತ್ತದೆ. ಈ ಬಗ್ಗೆ ನಾವು ಯಾರೂ ಏನನ್ನೂ ಹೇಳುವುದಕ್ಕೆ ಆಗುವುದಿಲ್ಲ ಎಂದು ಡಾಲಿ ಧನಂಜಯ ತಿಳಿಸಿದರು.

ಈ ಪ್ರಕರಣದ ಬಗ್ಗೆ ದರ್ಶನ್ ತಪ್ಪು ಮಾಡಿದ್ದಾರೋ ಇಲ್ಲವೋ ಎಂಬುದನ್ನು ನಾವ್ಯಾರೂ ಜಡ್ಜ್ ಮಾಡುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ನಟ ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದು ಡಾಲಿ ಧನಂಜಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News