×
Ad

ಬೆಂಗಳೂರಿನಲ್ಲಿ 'ಮೊಹಬ್ಬತ್‌ ಕಿ ದುಕಾನ್‌' ಉದ್ಘಾಟಿಸಿದ ಡಿಸಿಎಂ ಡಿ.ಕೆ ಶಿವಕುಮಾರ್

Update: 2023-11-14 16:15 IST

Photo Credit - Twitter@DKShivakumar

ಬೆಂಗಳೂರು: 'ಜವಾಹರ್ ಬಾಲ್ ಮಂಚ್' ಬೆಂಗಳೂರಿನ ಗಾಂಧಿ ಭವನದ ಬಳಿ ಆರಂಭಿಸಲಾದ "ಮೊಹಬ್ಬತ್ ಕಿ ದುಕಾನ್" ಅನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಂಗಳವಾರ ಉದ್ಘಾಟಿಸಿದರು. 

ಇನ್ನು ಇದನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಬೆಂಗಳೂರು ನಗರಗಳಾದ್ಯಂತ ವಿಸ್ತರಿಸುವ ಆಲೋಚನೆ ಇದೆ ಅವರು ತಿಳಿಸಿದ್ದಾರೆ. 

''ಭಾರತ್ ಜೋಡೋ‌ ಯಾತ್ರೆಯಲ್ಲಿ ನಮ್ಮ ನಾಯಕರಾದ ಶ್ರೀ ರಾಹುಲ್ ಗಾಂಧಿ ಅವರು ಘೋಷಿಸಿದ್ದ "ಮೊಹಬ್ಬತ್‌ ಕಿ ದುಕಾನ್‌" (ಪ್ರೀತಿಯ ಅಂಗಡಿ) ಪ್ರೀತಿಯನ್ನು ಹಂಚಲು ಸಿದ್ಧವಾಗಿದೆ. ಮಕ್ಕಳ ದಿನಾಚರಣೆ ಪ್ರಯುಕ್ತ ಜವಾಹರ್ ಬಾಲ್ ಮಂಚ್ ವತಿಯಿಂದ ಬೆಂಗಳೂರಿನ ಗಾಂಧಿ ಭವನದ ಬಳಿ ಆರಂಭಿಸಲಾದ "ಮೊಹಬ್ಬತ್ ಕಿ ದುಕಾನ್" ಅನ್ನು ಇಂದು ಉದ್ಘಾಟಿಸಿದೆ. ಬೆಂಗಳೂರಿನಲ್ಲಿ ಇದನ್ನು ಪ್ರಯೋಗಿಕವಾಗಿ ಆರಂಭಿಸಲಾಗಿದ್ದು, ಮೆಟ್ರೋ ನಗರಗಳಾದ್ಯಂತ ವಿಸ್ತರಿಸುವ ಆಲೋಚನೆ ಇದೆ'' ಎಂದು ಡಿ.ಕೆ ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News